Index   ವಚನ - 86    Search  
 
ಮನವು ಮಹಾದೇವನಲ್ಲಿ ವೇದ್ಯವಾದರೆ, ವೇದಶಾಸ್ತ್ರನಾಮದ ಶಿವನ ಅಂಗ ಲಿಂಗವ ಮಾಡಿ ಹಿಂಗದೆ ಸದಾ ಪೂಜೆಮಾಡಬಲ್ಲರೆ ಶಾಸ್ತ್ರ. ಪೂರ್ವವನಳಿದು ಪುನರ್ಜಾತನಾಗಿ ಮಾಯಾಮದ ಹಿಂಗಿಸಿ ಆ ಜ್ಞಾನ ಅಂಗದೊಳು ಪೂರಿತವಾಗಿರಬಲ್ಲರೆ ಪುರಾಣ. ಅಂತರಂಗದ ಅಷ್ಟಮದ ಹಿಂಗಿ, ನಿರಂತರನಾಗಿರಬಲ್ಲುದೆ ಆಗಮ. ಇಂತಪ್ಪ ವೇದಶಾಸ್ತ್ರಪುರಾಣಾಗಮವ ಬಲ್ಲ ನಿಜದೇಹಿಗಳ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.