Index   ವಚನ - 97    Search  
 
ಕುಲದಲ್ಲಿ ಶಿವಕುಲವೆಂಬೆ, ಛಲದಲ್ಲಿ ಶಿವಛಲವೆಂಬೆ, ರೂಪದಲ್ಲಿ ಶಿವರೂಪವೆಂಬೆ, ಯೌವ್ವನದಲ್ಲಿ ಶಿವಯೌವ್ವನವೆಂಬೆ, ವಿದ್ಯೆಯಲ್ಲಿ ಶಿವವಿದ್ಯೆಯೆಂಬೆ, ಧನದಲ್ಲಿ ಶಿವಧನವೆಂಬೆ, ರಾಜ್ಯದಲ್ಲಿ ಶಿವರಾಜ್ಯವೆಂಬೆ, ತಪದಲ್ಲಿ ಶಿವತಪವೆಂಬೆ. ಇಂತೀ ಅಷ್ಟಮದಮುಖದಲ್ಲಿ ಶಿವಮುಖವಾಗಿಪ್ಪ ಶಿವಶರಣರ ಚರಣಕ್ಕೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.