ಕಾಮವೆಂಬ ಆನೆಯ ಕಾಲಿಂಗೆ ಹಾಕಿ ತುಳಿಸಿ,
ಕ್ರೋಧವೆಂಬ ಹುಲಿಯ ಬಳಿಯಿಕ್ಕಿ,
ಲೋಭವೆಂಬ ಸರ್ಪನ ಕಚ್ಚಿಸಿ,
ಮೋಹವೆಂಬ ಸಿಂಹ[ನ] ತೊಡರಿಸಿ,
ಮದವೆನಿಪ್ಪ ಮರೆಯಹಿಂಡ ಕವಿಸಿ,
ಮತ್ಸರವೆಂಬ ಭಲ್ಲೂಕಂಗಳನಡರಿಸಿ,
ಭವಾರಣ್ಯದ ಬಟ್ಟೆಯೊಳು
ತಿರುವಿ ತಿರುವಿ ಕಾಡುತಿದ್ದೆಯಲ್ಲ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Kāmavemba āneya kāliṅge hāki tuḷisi,
krōdhavemba huliya baḷiyikki,
lōbhavemba sarpana kaccisi,
mōhavemba sinha[na] toḍarisi,
madavenippa mareyahiṇḍa kavisi,
matsaravemba bhallūkaṅgaḷanaḍarisi,
bhavāraṇyada baṭṭeyoḷu
tiruvi tiruvi kāḍutiddeyalla
paramaguru paḍuviḍi sid'dhamallināthaprabhuve.
ಸ್ಥಲ -
ಅರಿಷಡುವರ್ಗ ನಿರಸನಸ್ಥಲ