ಸಪ್ತವ್ಯಸನವೆಂಬ ಪಾಪಿಯ ಕೂಸಿಂಗೆ
ಒಪ್ಪಿಸಿಕೊಟ್ಟು ನೀನಗಲಬೇಡವೊ ಗುರುವೆ.
ಉರಿಗೆ ಕೊಟ್ಟ ಅರಗಿನಂದದಿ, ಕಿರಾತನ ಕೈಯ
ಲಿರುವ ಎರಳೆಯ ಮರಿಯಂತೆ, ಪಂಜರದೊಳಗ-
ಣರಗಿಣಿಯ ಮಾರ್ಜಾಲಗೆ ಸೆರೆಗೊಡುವಂತೆ,
ಪರಿಯಲೆನ್ನನು ಮನಭ್ರಮೆಯ ಸಪ್ತವ್ಯಸನಕ್ಕೆ
ಗುರಿಮಾಡಿ ನೀ ಎನ್ನ ಅಗಲಿಹೋಗದೆ ಕರುಣಾ
ಕರ ರಕ್ಷಿಸಯ್ಯಾ ಕೃಪೆಯಿಂದ ರಕ್ಷಿಸು ಸದ್ಗುರುರಾಯ. | 1 |
ತನು ಮನ ವ್ಯಸನ ತಪಸ್ಸಂಧಕಾರದ
ಧನವ್ಯಸನದ ಬಯಕೆಯ ರಾಜ್ಯವ್ಯಸನದ
ವಿನಯದುತ್ಸಾಹ ವ್ಯಸನವಿಶ್ವಾಸದಿಂದ ಪರರ
ಅನುದಿನ ಆಶ್ರಯಿಸುವ ಸೇವಕ ವ್ಯ
ಸನಗುಣವ ಕೊಟ್ಟು ಸಪ್ತವ್ಯಸನಕ್ಕೆ ಗುರಿ ಮಾಡಿ
ತ್ರಿಣಯ ಸದ್ಗುರುರಾಯ ಅಗಲದಿರಯ್ಯ. | 2 |
ಓಡಿನಲ್ಲುಂಟೆ ಕನ್ನಡಿಯ ನೋಟವು? ಭವ
ಕಾಡೊಳು ತಿರುಗಿಯೆ ಸತ್ತು ಹುಟ್ಟುತಿಹೆ;
ಮೂಢನಪಾಯವ ಕಾಯೋ ದೇವ, ನಿಮ್ಮೊ
ಳಾಡಲು ಹುರುಳಿಲ್ಲ, ಎನ್ನ ಗುಣವನು
ನೋಡಿ ಕಾಡದೆ ಬಿಡಬೀಸದೆ ಕುಮಾರನ
ಕೂಡಿಕೊ ಗುರು ಪಡುವಿಡಿ ಸಿದ್ಧಮಲ್ಲೇಶ. | 3 |
Art
Manuscript
Music
Courtesy:
Transliteration
Saptavyasanavemba pāpiya kūsiṅge
oppisikoṭṭu nīnagalabēḍavo guruve.
Urige koṭṭa araginandadi, kirātana kaiya
liruva eraḷeya mariyante, pan̄jaradoḷaga-
ṇaragiṇiya mārjālage seregoḍuvante,
pariyalennanu manabhrameya saptavyasanakke
gurimāḍi nī enna agalihōgade karuṇā
kara rakṣisayyā kr̥peyinda rakṣisu sadgururāya. | 1 |
Tanu mana vyasana tapas'sandhakārada
dhanavyasanada bayakeya rājyavyasanada
vinayadutsāha vyasanaviśvāsadinda parara
anudina āśrayisuva sēvaka vya
sanaguṇava koṭṭu saptavyasanakke guri māḍi
Triṇaya sadgururāya agaladirayya. | 2 |
Ōḍinalluṇṭe kannaḍiya nōṭavu? Bhava
kāḍoḷu tirugiye sattu huṭṭutihe;
mūḍhanapāyava kāyō dēva, nim'mo
ḷāḍalu huruḷilla, enna guṇavanu
nōḍi kāḍade biḍabīsade kumārana
kūḍiko guru paḍuviḍi sid'dhamallēśa. | 3 |
ಸ್ಥಲ -
ಸಪ್ತವ್ಯಸನ ನಿರಸನಸ್ಥಲ