ಪಂಚೇಂದ್ರಿಯೆಂಬ ಕರ್ಮಿಗಳ
ಉರಿಯ ಪ್ರಪಂಚಿಗೆ ಗುರಿಯಾಗಿ
ಯತಿ ಸಿದ್ಧ ಸಾಧ್ಯರೆಲ್ಲ ಮತಿಭ್ರಷ್ಟರಾದರು.
ಅದು ಎಂತೆಂದೊಡೆ:
ಹಾಳೂರ ಹೊಕ್ಕರೆ ನಾಯ ಜಗಳವ ಕಂಡಂತೆ,
ಶಿವಜ್ಞಾನವಿಲ್ಲದಂಗಹಾಳಿಂಗೆ ಪಂಚೇಂದ್ರಿಯವೆಂಬ,
ನಾಯಿ ಬೊಗಳೆ ಹಂಚು[ಹರಿಯಾದರು] ಕೆಲಬರು.
ಇಂತೀ ಪಂಚೇಂದ್ರಿಯಂಗಳು ಸುಟ್ಟು
ಲಿಂಗೇಂದ್ರಿಯಮುಖವಾಗಿಪ್ಪ ಶರಣನ
ಏನೆಂದು ಉಪಮಿಸುವೆನಯ್ಯಾ?
ಆತನಂಗವೆ ಶಿವನಂಗ, ಶಿವನಂಗವೆ ಶರಣನಂಗ,
ಸಾಕ್ಷಿ:
``ಶಿವಾಂಗಂ ಶರಣಾಂಗಂ, ಚ ಶರಣಾಂಗಂ ಶಿವಾಂಗಕಂ|
ದ್ವಯೋರಂಗಯೋರ್ಭೇದಃ ನಾಸ್ತಿ ಸಾಕ್ಷಾತ್ ಪರಶಿವಃ ||''
ಎಂದುದಾಗಿ, ನಿಮ್ಮ ಶರಣರ ದರುಶನದಿಂದಲೆನ್ನ ಬದುಕಿಸಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Pan̄cēndriyemba karmigaḷa
uriya prapan̄cige guriyāgi
yati sid'dha sādhyarella matibhraṣṭarādaru.
Adu entendoḍe:
Hāḷūra hokkare nāya jagaḷava kaṇḍante,
śivajñānavilladaṅgahāḷiṅge pan̄cēndriyavemba,
nāyi bogaḷe han̄cu[hariyādaru] kelabaru.
Intī pan̄cēndriyaṅgaḷu suṭṭu
liṅgēndriyamukhavāgippa śaraṇana
ēnendu upamisuvenayyā?
Ātanaṅgave śivanaṅga, śivanaṅgave śaraṇanaṅga,
sākṣi:``Śivāṅgaṁ śaraṇāṅgaṁ, ca śaraṇāṅgaṁ śivāṅgakaṁ|
dvayōraṅgayōrbhēdaḥ nāsti sākṣāt paraśivaḥ ||''
endudāgi, nim'ma śaraṇara daruśanadindalenna badukisayyā
paramaguru paḍuviḍi sid'dhamallināthaprabhuve.
ಸ್ಥಲ -
ಪಂಚೇಂದ್ರಿಯ ನಿರಸನಸ್ಥಲ