ಮೊಲನ ಕಂಡರೆ ಶ್ವಾನಂಗಳು ತುಡುಕುವಂತೆ.
ಹೊನ್ನು ಹೆಣ್ಣು ಮಣ್ಣು ಮೂರೆಂಬ ಮೊಲಕ್ಕೆ
ಪಂಚೇಂದ್ರಿಯಂಗಳೆಂಬ ಬೇಟೆಯ ನಾಯಿಗಳು
ತೊಡರುತ ಎನ್ನ ಬಿಡು ತನ್ನ ಬಿಡು ಎನ್ನುತ್ತಲಿವೆ.
ನೊಂದೆನಿವರ ದಾಳಿಯಲ್ಲಿ, ಬೆಂದೆನಿವರ ದಾಳಿಯಲ್ಲಿ.
ನೊಂದು ಬೆಂದು ಕುಂದಿ ಕುಸಿವನ `ಕಂದ ಬಾ' ಎಂದು
ಎನ್ನ ತಲೆದಡಹೊ ಭವವಿರಹಿತ ತಂದೆ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Molana kaṇḍare śvānaṅgaḷu tuḍukuvante.
Honnu heṇṇu maṇṇu mūremba molakke
pan̄cēndriyaṅgaḷemba bēṭeya nāyigaḷu
toḍaruta enna biḍu tanna biḍu ennuttalive.
Nondenivara dāḷiyalli, bendenivara dāḷiyalli.
Nondu bendu kundi kusivana `kanda bā' endu
enna taledaḍaho bhavavirahita tande
paramaguru paḍuviḍi sid'dhamallināthaprabhuve.
ಸ್ಥಲ -
ಪಂಚೇಂದ್ರಿಯ ನಿರಸನಸ್ಥಲ