Index   ವಚನ - 172    Search  
 
ಮಾಯದ ಸಂಸಾರಬಲೆಯೊಳು ಸಿಲ್ಕಿ ಆಯಾಸಗೊಳುತ ಒರಲೊರಲಿ ಕರೆದರೆ 'ಓ' ಎನ್ನಲೊಲ್ಲೆಯೇಕೋ ಅಯ್ಯಾ? ಒಂದರ ಮುಂದೆ ಹುಲ್ಲು, ಒಂದರ ಮುಂದೆ ಕಲ್ಲು ಹಾಕಿದಂತೆ ಮಾಡಬೇಡಯ್ಯಾ. ಒಬ್ಬರಿಗೊಲಿದು ಒಬ್ಬರ ಕಾಡಬೇಡಯ್ಯಾ. ನಿನಗೇಕೆ ಪ್ರಪಂಚದ ಗುಣ? ನಿಃಪ್ರಪಂಚ ನಿರ್ಲೇಪ ನಿಜಗುಣ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.