Index   ವಚನ - 173    Search  
 
ಎಂದಾದರೂ ಸಂಸಾರದಂದುಗ ಬಿಡದು ನೋಡಯ್ಯಾ! ಎಂದಾದರೂ ಸಂಸಾರಬಂಧನ ಬಿಡದು ನೋಡಯ್ಯಾ! ಎಂದಾದರೂ ಸಂಸಾರವಿಷಯ ಹಿಂಗದು ನೋಡಯ್ಯಾ! ಸಂಸಾರದಂದುಗ ಕಳೆದು ನಿರ್ದಂದುಗನಾಗಿಪ್ಪುದು ಎಂದೊ ಎಂದೊ? ನಿಮ್ಮ ನೆನವು ನೆಲೆಗೊಂಬುದು ಎಂದೊ ಎಂದೊ? ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.