Index   ವಚನ - 184    Search  
 
ಹೊತ್ತು ಹೋಗಿ ಕತ್ತಲೆಯಾಗದಕಿಂದ ಮೊದಲೆ, ಇತ್ತಣ ಮಾಯವಳದು ಅತ್ತಣ ರೂಹು ನೆಲೆಗೊಂಡು ಹೊತ್ತಾರೆ ಬೆಯಿಗೆ[ಯೆ]0ಬ ಮಿಥ್ಯವನಳಿದು, ಸಂಸಾರಬಂಧನವ ಕಳೆದು ನಿರ್ಬಂಧನವಶರಾಗಿಪ್ಪ ಸತ್ಯಸದಾಚಾರಿಗಳ ಪಾದವ ತೋರಿ ಬದುಕಿಸು. ಗಡಗಡನುರುಳುವೆ ಎನ್ನವಸರವಂ ಕಳೆಯಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.