Index   ವಚನ - 198    Search  
 
ಏನು ಸುಕೃತದ ಫಲವೊ, ಅದೇನು ಪುಣ್ಯವೋ, ಅದೇನು ಭಾಗ್ಯವೋ, ಅದೇನು ತಪಸಿನ ಫಲವೋ, ಅದೇನು ಕಾರಣವಾಗಿ ಗುರುಪಾದ ದೊರೆಯಿತ್ತು. ಗುರುಪಾದ ದರುಶನದಿಂದ ಕಿಂಕುರ್ವಾಣ ಭಯಭಕ್ತಿಯಿಂದಿರುತಿರೆ, ಗುರು ಕರುಣಿಸಿ ಇಷ್ಟಲಿಂಗವನೆನ್ನ ಕರಕೆ ಸೇರಿಸಿ, ಪೂರ್ವಜನ್ಮವ ಕಳೆದು ಪುನರ್ಜಾತನ ಮಾಡಿದ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಗುರುವ ಮರೆದವರಿಗೆ ಇದೇ ನರಕ.