Index   ವಚನ - 223    Search  
 
ಜ್ಞಾನ ಗುರುವಿಗೆ ಜ್ಞಾನ ಶಿಷ್ಯನಾದರೆ ಜೇನುತುಪ್ಪದೊಳು ಮಧುರ ಬೆರೆದಂತೆ. ಅಜ್ಞಾನಿ ಗುರುವಿಂಗೆ ಅಜ್ಞಾನಿ ಶಿಷ್ಯನಾದರೆ ಅಮವಾಸೆಯ ಮುಂದಣ ಕಾಳದೊಳು ಮೋಡಕವಿದು ಘೋರಾಂಧಕಾರ ಕತ್ತಲೆಯಾದಂತೆ. ಎನ್ನ ಗುರು ಶಿಷ್ಯ ಸಂಬಂಧ ಇಂತಲ್ಲವಯ್ಯಾ! ಎನ್ನ ಗುರು ಜ್ಞಾನಿಯಲ್ಲ, ಅಜ್ಞಾನಿಯಲ್ಲ. ಜ್ಞಾನಿಯಜ್ಞಾನಿಯಿಬ್ಬರಿಗೆ ಸುಜ್ಞಾನವನೀವ ನಿಬ್ಬೆರಗಿ ಪರಮಾತ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.