Index   ವಚನ - 225    Search  
 
ಗುರು ಕರುಣಾಕರ ಪರಶಿವ ಪರಮ ಗುರು ಭವಹರ ಚಿನ್ಮಯ ಚಿದ್ರೂಪ ಗುರುವೆ ನಿರಂಜನ ನಿರ್ಮಳ ನಿಃಕಳಗುರುವೆ ಸುರತುರವೆ. ವಹ್ನಿ ವಿಪಿನ ತರು ಕಾಷ್ಠವ ಸುಡುವಂ ತೆನ್ನ ಭವದ ಗೊಂಡಾರಣ್ಯವ ನೆನ್ನಯ ಗುರುಕರುಣಗ್ನಿಯಲ್ಲಿ ಉರುಹಿ ಮುನ್ನಿನ ಸುಕೃತದ ದೆಸೆಯಲಿ ಗುರುಕೃಪೆ ಅನ್ಯಥಾ ಭಾಗ್ಯವ ಪಡೆದೆನು ಪರುಷದ ಸನ್ನಿಧಿಯಲಿಹ ಲೋಹ ಪರಿಗು ಸಯುಕ್ತ. | 1 | ಅಂಗಾತ್ಮನ ಪ್ರಾಣನ ಭವಿತನಗಳ ಹಿಂಗಿಸಿ ಅವಿರಳ ಪರಬ್ರಹ್ಮದ ಮಹಾ ಲಿಂಗವ ಕರ ಉರ ಶಿರ ಮನ ಭಾವದಲ್ಲಿ ಸಂಗವ ಮಾಡಿಯೆ ಪ್ರಕೃತಿ ವಿಕೃತಿ ವಿಷ- ಯಂಗಳನೆಲ್ಲವ ತೊರೆಸಿ ಗಣಂಗಳ ಡಿಂಗರಿಗನ ಮಾಡಿದೆನ್ನಯ ಗುರುಮಹಿಮೆ. | 2 | ದುರ್ಲಿಖಿತಂಗಳ ತೊಡೆದು ವಿಭೂತಿ ಧರಿಸ ಕಲಿಸಿ ಫಣಿಯೊಳು ರುದ್ರಾಕ್ಷಿಯ ಸರಮಾಲೆಯ ತೊಡಕಲಿಸಿ ಷಡ ಕ್ಷರಿಯ ಸ್ಮರಿಸ ಕಲಿಸಿ `ಶಿವಧ್ಯಾನವ ಹಿಂಗದ ಲಿರು ನೀ ಕಂದಾ' ಯೆಂದು ಅಭಯಕರ ಶಿರದೊಳು ಮಡುಗಿಯೆ ಸಲುಹಿದ ಗುರು ನಿತ್ಯ. | 3 | ರಂಬಿಸಿ ನಿಲ್ಲದಳುವಿಂಗೆ ಕಂದೆಗೆ ಮೇಣ್ ರಂಭೆ ಸ್ತನವನೂಡಿಯೆ ಸಲಹುವ ತೆರ ಹಂಬಲಿಸಿ ಭಯಪಡುತಿಹಗೆ ಸೂರ್ಯ ನೀನೆ ಶಂಭು ಚರಣತೀರ್ಥಪ್ರಸಾದವ ನುಂಬಕಲಿಸಿಯೆ ಅನ್ಯಹಾರದ ಬೆಂಬಳಿಗಳ ಕೆಡಿಸಿದೆನ್ನಯ ಗುರು ಮಹಿಮೆ. | 4 | ಮಾಡಕಲಿಸಿದ ಲಿಂಗದ ಸೇವೆಯ ಸದಾ ನೀಡಕಲಿಸಿದ ಜಂಗಮಕಮೃತಾನ್ನವ ಬೇಡಕಲಿಸಿ ಮುಕ್ತಿಯ ಫಲಪದವ ಗೂಡಕಲಿಸಿ ಶಿವಾನಂದದಾ ಲೀಲೆಯೊ ಳಾಡಕಲಿಸಿ ನಿಜ ನಿತ್ಯ ನಿರ್ಮಳನ ಮಾಡಿದ ಗುರುವರ ಸಿದ್ಧಮಲ್ಲೇಶಾ | 5 |