ಅಂತರಂಗದಲ್ಲಿ ಜ್ಞಾನಪರಿಪೂರ್ಣನಾಗಿ ಸರ್ವಾಂಗವೆಲ್ಲ
ಲಿಂಗಮಯವೆಂದು ಜ್ಞಾನದ ಕಣ್ಣಲಿ ಕಂಡು,
ಅರುಹು ಪರಮಾರ್ಥನೊಳು ಬೆರದು,
ಅಚಲಿತಶರಣನಾದೆನೆಂದು,
ಬಹಿರಂಗದಲ್ಲಿ ಗುರುಕರುಣದ
ಇಷ್ಟಲಿಂಗಧಾರಣವಿಲ್ಲದಿರಬಹುದೇ?
ಇರಬಾರದು ; ಇದ್ದರೆ ಮಹಾನರಕ.
ಮೂರುಕಣ್ಣುಳ್ಳ ಶಿವನಾದರೂ ಆಗಲಿ,
ಅಂಗದ ಮೇಲೆ ಇಷ್ಟಲಿಂಗವಿಲ್ಲದೆ
ಸುಜ್ಞಾನಿಶರಣನಾದನೆಂದು ನುಡಿದುಕೊಂಡು ನಡೆದರೆ
ಅದ ನಮ್ಮ ಪುರಾತರು ಮೆಚ್ಚುವರೆ? ಮೆಚ್ಚರು.
ಮೆಚ್ಚರಾಗಿ ನಾಯಕನರಕ ತಪ್ಪದು.
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Antaraṅgadalli jñānaparipūrṇanāgi sarvāṅgavella
liṅgamayavendu jñānada kaṇṇali kaṇḍu,
aruhu paramārthanoḷu beradu,
acalitaśaraṇanādenendu,
bahiraṅgadalli gurukaruṇada
iṣṭaliṅgadhāraṇavilladirabahudē?
Irabāradu; iddare mahānaraka.
Mūrukaṇṇuḷḷa śivanādarū āgali,
aṅgada mēle iṣṭaliṅgavillade
sujñāniśaraṇanādanendu nuḍidukoṇḍu naḍedare
ada nam'ma purātaru meccuvare? Meccaru.
Meccarāgi nāyakanaraka tappadu.
Paramaguru paḍuviḍi sid'dhamallināthaprabhuve.