ನಿರಾಕಾರ ಪರಬ್ರಹ್ಮವಸ್ತು ಎನ್ನ ಕರಸ್ಥಲಕೆ
ಆಕಾರವಾಗಿ ಬಂದರೆ
ಹೊಗಳಲಮ್ಮೆ, ಹೊಗಳದಿರಲಮ್ಮೆ.
ಅದೇನು ಕಾರಣವೆಂದರೆ:
ಬ್ರಹ್ಮ ವಿಷ್ಣು ರುದ್ರರ ಸ್ತುತಿಗೆ ನಿಲುಕದ ವಸ್ತುವೆನ್ನ
ನೆಮ್ಮಲು ನಾ ಬದುಕಿದೆನಯ್ಯಾ ನಾ ಬದುಕಿದೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Nirākāra parabrahmavastu enna karasthalake
ākāravāgi bandare
hogaḷalam'me, hogaḷadiralam'me.
Adēnu kāraṇavendare:
Brahma viṣṇu rudrara stutige nilukada vastuvenna
nem'malu nā badukidenayyā nā badukidenayyā
paramaguru paḍuviḍi sid'dhamallināthaprabhuve.