ಹರಲಿಂಗಕೆ ಹರಿ ಅಜಾಸುರರು ಸರಿಯೆಂಬ
ಕುರಿಮಾನವ ನೀ ಕೇಳಾ.
ಹರ ನಿತ್ಯ, ಹರಿಯಜಾಸುರರು ಅನಿತ್ಯ.
ಅದೇನು ಕಾರಣವೆಂದರೆ:
ಹರಿಗೆ ಹತ್ತು ಪ್ರಳಯ, ಬ್ರಹ್ಮಂಗೆ ಅನಂತಪ್ರಳಯ,
ಸುರರ ಪ್ರಳಯವೆಂದರೆ ಅಳವಲ್ಲ.
ಪ್ರಳಯಕ್ಕೆ ಗುರಿಯಾಗಿ ಸತ್ತು ಸತ್ತು
ಹುಟ್ಟುವ ಅನಿತ್ಯದೈವವ ತಂದು
ನಿತ್ಯವುಳ್ಳ ಶಿವಂಗೆ ಸರಿಯೆಂಬ ವಾಗದ್ವೈತಿಯ ಕಂಡರೆ
ನೆತ್ತಿಯ ಮೇಲೆ ಟೊಂಗನಿಕ್ಕೆಂದಾತ ನಮ್ಮ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Haraliṅgake hari ajāsuraru sariyemba
kurimānava nī kēḷā.
Hara nitya, hariyajāsuraru anitya.
Adēnu kāraṇavendare:
Harige hattu praḷaya, brahmaṅge anantapraḷaya,
surara praḷayavendare aḷavalla.
Praḷayakke guriyāgi sattu sattu
huṭṭuva anityadaivava tandu
nityavuḷḷa śivaṅge sariyemba vāgadvaitiya kaṇḍare
nettiya mēle ṭoṅganikkendāta nam'ma
paramaguru paḍuviḍi sid'dhamallināthaprabhuve.