Index   ವಚನ - 278    Search  
 
ಶ್ರೀಪಂಚಾಕ್ಷರಿಯ ಮೂಲದ ಹೊಲಬ ತಿಳಿಯಬಲ್ಲಾತನೆ ವೇದಾಂತವ ಬಲ್ಲಾತನೆಂಬೆ. ಶ್ರೀಪಂಚಾಕ್ಷರಿಯ ಮೂಲದ ಹೊಲಬ ತಿಳಿಯಬಲ್ಲಾತನೆ ಸಿದ್ಧಾಂತವ ಬಲ್ಲಾತನೆಂಬೆ. ಶ್ರೀಪಂಚಾಕ್ಷರಿಯ ಮೂಲವ ಬಲ್ಲಾತನೆ ವೇದ ಶಾಸ್ತ್ರ ಪುರಾಣ ಆಗಮವ ಬಲ್ಲಾತನೆಂಬೆ. ಶ್ರೀಪಂಚಾಕ್ಷರಿಯ ಧ್ಯಾನವ ಧ್ಯಾನಿಸಲರಿಯದೆ ವೇದಾಗಮವನೋದುತ್ತಿದ್ದೆವೆಂಬ ಪಿಸುಣರ ಓದೆಲ್ಲ ಕುಂಬಿಯ ಮೇಲೆ ಕುಳಿತು ಒದರುವ ವಾಯಸನ ಸರಿಯೆಂಬೆನಯ್ಯಾ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.