Index   ವಚನ - 279    Search  
 
ಶ್ರೀ ಪಂಚಾಕ್ಷರಿಯುಳ್ಳ ಅಗ್ರಜ ವಿಪ್ರನಿಂದಧಿಕ ನೋಡಾ! ಶ್ರೀ ಪಂಚಾಕ್ಷರಿಯುಳ್ಳ ಅಂತ್ಯಜ ವಿಪ್ರನಿಂದಧಿಕ ನೋಡಾ! ಶ್ರೀ ಪಂಚಾಕ್ಷರಿಯನಾವಾತನಾದರೂ ನೆನೆದರೆ ರುದ್ರನಪ್ಪುದು ತಪ್ಪದು ನೋಡಾ ಅಯ್ಯಾ! ಅದೆಂತೆಂದರೆ: ಸಾಕ್ಷಿ: “ಅಗ್ರಜೋ ಅಂತ್ಯಜೋ ವಾಪಿ ಮೂರ್ಖೋವಾ ಪಂಡಿತೋsಪಿವಾ | ಜಪೇತ್ ಪಂಚಾಕ್ಷರೀಂ ನಿತ್ಯಂ ಸ ರುದ್ರೋ ನಾತ್ರ ಸಂಶಯಃ ||'' ಎಂದಿತ್ತು ದೃಷ್ಟ. `ಓಂ ನಮಃ ಶಿವಾಯಃ' ಯೆಂಬ ಆರಕ್ಷರವ ನೆನೆಯಲರಿಯದೆ ಜಪ ತಪ ನೇಮ ನಿತ್ಯ ಅನುಷ್ಠಾನ ಪೂಜೆಗಳೆಲ್ಲ ನಿಷ್ಫಲವೆಂದಿತ್ತು ರಹಸ್ಯದಲ್ಲಿ. ಸಾಕ್ಷಿ: “ಷಡಕ್ಷರಮಿದಂ ಖ್ಯಾತಂ ಷಡಾನನಂ ಷಡನ್ವಿತಂ | ಷಡ್ವಿಧಂಯೋನ ಜಾನಾತಿ ಪೂಜಾಯಾಂ ನಿಃಫಲಂ [ಭವೇತ್]'' ಎಂಬ ಷಡಕ್ಷರಿಯ ಸಂಭ್ರಮದಲ್ಲಿ ನೆನೆದು, ಭವಾಂಬೋಧಿಯ ದಾಂಟಿ, ಸ್ವಯಂಭುವಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.