Index   ವಚನ - 291    Search  
 
ಅಜ್ಞಾನ ಕುಕರ್ಮದಿಂದ ಮುಸುಕಿದ ಕತ್ತಲೆಗೆ ಸುಜ್ಞಾನಜ್ಯೋತಿ ಎರೆಯಲ್ಪಟ್ಟ ಪರಮಗುರುವೆಂದಿತ್ತು ರಹಸ್ಯ. ಸಾಕ್ಷಿ: “ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ | ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ ||'' ಎಂದೆಂಬ ಗುರು. ``ಆಕಾಶೋ ಲಿಂಗಮೂಲಂ ಚ ಪೃಥ್ವೀ ತಸ್ಯಾದಿ ಪೀಠಕಂ | ಆಲಯಂ ಸರ್ವಭೂತಾನಾಂ ಲಯಂ ಚ ಲಿಂಗಮುಚ್ಯತೇ ||'' ಎಂದೆಂಬ ಲಿಂಗವು. ``ಜಕಾರಂ ಹಂಸವಾಹಸ್ಯ ಗಕಾರಂ ಗರುಢಧ್ವಜಂ | ಮಕಾರಂ ರುದ್ರರೂಪಂ ಚ ತ್ರಿಮೂರ್ತ್ಯಾತ್ಮಕಜಂಗಮಃ ||'' ಎಂದೆಂಬ ಜಂಗಮವು. ``ಶ್ರಾದ್ಧಂ ಯಜ್ಞಂ ಜಪಂ ಹೋಮಂ ವೈಶ್ವದೇವಸುರಾರ್ಚನಂ | ಧೃತತ್ರಿಪುಂಡ್ರಪೂತಾತ್ಮಾ ಮೃತ್ಯುಂಜಯತಿ ಮಾನವಃ ||'' ಎಂದೆಂಬ ವಿಭೂತಿ. ``ರುದ್ರಾಕ್ಷಿಧಾರಣಂ ಸರ್ವಂ ಜಟಾಮಂಡಲಧಾರಿಣಿ | ಅಕ್ಷಮಾಲಾರ್ಪಿತಕರ ಕಮಂಡಲಕರಾನ್ವಿತಂ || ತ್ರಿಪುಂಡ್ರಾವಲಿಯುಕ್ತಾಂ | ಆಷಾಡೇನ ವಿರಾಜಿತಂ ಋಗ್ಯಜುಃಸಾಮ ರೂಪೇಣ | ಸೇವ ತಸ್ಮೈ ಸ್ವರಃ ಇತಿ | ತ್ರೈವ ಗಾಯಿತ್ರೇವ ವರಾನನೇ ||'' (?) ಎಂದೆಂಬ ವಿಭೂತಿ ರುದ್ರಾಕ್ಷಿ. ``ಜ್ಞಾನ ಪ್ರಾಣ ಬೀಜಂ ಚ ನಕಾರಂ ಚ ಆಚಾರಕಂ | ಮಕಾರಂ ಚ ಗುರೋರ್ಬೀಜಂ ಶಿಕಾರಂ ಲಿಂಗಮರ್ತ್ಯಕಂ || ವಕಾರಂ ಚ ಬೀಜಂ ಚ ಯಕಾರಂ ಪ್ರಾಸಕಂ | ಏವಂ ಬೀಜಾಕ್ಷರಂ ಜ್ಞಾತುಂ ದುರ್ಲಭಂ ಕಮಲಾನನೆ ||'' ಎಂದೆಂಬ ಷಡಕ್ಷರಿಮಂತ್ರವು. ``ಶೋಷಣಂ ಪಾಪಪಂಕಸ್ಯ ದೀಪನಂ ಜ್ಞಾನತೇಜಸಃ | ಗುರುಪಾದೋದಕಂ ಪೀತ್ವಾ ಸಂಸಾರದ್ರುಮನಾಶನಂ ||'' ಎಂದೆಂಬ ಪಾದೋದಕವು. ``ಪ್ರಸಾದಂ ಗಿರಿಜಾದೇವಿ ಸಿದ್ಧಕಿನ್ನರಗುಹ್ಯಕಃ | ವಿಷ್ಣು ಮುಖ್ಯಾದಿದೇವಾನಾಮಗ್ರಾಹ್ಯೋsಯಮಗೋಚರಃ ||'' ಎಂದೆಂಬ ಪ್ರಸಾದವು. ಇನಿತು ತೆರದ ಅಷ್ಟಾವರಣದ ಶ್ರುತ ದೃಷ್ಟವ ಕಂಡು ಘನವೆಂದು ನಂಬಿದಾತನೆ ಸತ್ಯಸದಾಚಾರಿ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.