ಬಸವಣ್ಣ ಶ್ರುತಿಸಿದ ವಾಕ್ಯದಿಂದ
ಗುರುವೆಂಬ ಮಹಿಮೆಯ ಕಂಡೆನಯ್ಯಾ!
ಬಸವಣ್ಣ ಶ್ರುತಿಸಿದ ವಾಕ್ಯದಿಂದ ಲಿಂಗಸಾವಧಾನದ ಗೊತ್ತಿನ
ಪರಿಣಾಮದ ಸುಖದ ಸುಗ್ಗಿಯ ಕಂಡೆನಯ್ಯಾ!
ಬಸವಣ್ಣ ಶ್ರುತಿಸಿದ ವಾಕ್ಯದಿಂದ ಪಾದೋದಕ ಪ್ರಸಾದವ
ನಿತ್ಯ ನಾ ಸೇವಿಸಿ ಭವದಗ್ಧನಾದೆನಯ್ಯಾ!
ಬಸವಣ್ಣ ಶ್ರುತಿಸಿದ ವಾಕ್ಯದಿಂದ
ಭಕ್ತಿ ಉನ್ನತವೆಂದು ನಂಬಿದೆನಯ್ಯಾ!
ಅದೇನು ಕಾರಣವೆಂದರೆ:
ಸಿರಿಗಂಧದೊತ್ತಿಲಿದ್ದ ಜಾಲಿಗೆ ಪರಿಮಳ
ಬಾರದಿಹುದೇನಯ್ಯಾ?
ಮರುಗದಗಿಡದೊತ್ತಿಲಿದ್ದ ಗರಗಕ್ಕೆ ಪರಿಮಳ
ಬಾರದಿಹುದೇನಯ್ಯಾ?
ಬಸವಣ್ಣನ ಸೆರಗ ಸೋಂಕಿದ ಮನುಜರೆಲ್ಲ
ಶಿವಗಣಂಗಳಾಗದಿಹರೇನಯ್ಯಾ?
ಇದು ಕಾರಣ,
ಬಸವಣ್ಣನ ವಚನಾಮೃತವ ದಣಿಯಲುಂಡು ತೇಗಿದರೆ
ಪಾತಕಕೋಟಿ ಪರಿಹಾರವಾಗದಿಹದೇನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ?
Art
Manuscript
Music
Courtesy:
Transliteration
Basavaṇṇa śrutisida vākyadinda
guruvemba mahimeya kaṇḍenayyā!
Basavaṇṇa śrutisida vākyadinda liṅgasāvadhānada gottina
pariṇāmada sukhada suggiya kaṇḍenayyā!
Basavaṇṇa śrutisida vākyadinda pādōdaka prasādava
nitya nā sēvisi bhavadagdhanādenayyā!
Basavaṇṇa śrutisida vākyadinda
bhakti unnatavendu nambidenayyā!
Adēnu kāraṇavendare:
Sirigandhadottilidda jālige parimaḷa
bāradihudēnayyā?
Marugadagiḍadottilidda garagakke parimaḷa
Bāradihudēnayyā?
Basavaṇṇana seraga sōṅkida manujarella
śivagaṇaṅgaḷāgadiharēnayyā?
Idu kāraṇa,
basavaṇṇana vacanāmr̥tava daṇiyaluṇḍu tēgidare
pātakakōṭi parihāravāgadihadēnayyā
paramaguru paḍuviḍi sid'dhamallināthaprabhuve?