Index   ವಚನ - 299    Search  
 
ಗುರುಲಿಂಗಜಂಗಮವ ನೆರೆ ನಂಬಿಪ್ಪಾತನೆ ಶಿವಭಕ್ತ. ಗುರುಲಿಂಗಜಂಗಮವೆ ಶಿವನೆಂದು ಅರ್ಥ ಪ್ರಾಣ ಅಭಿಮಾನವ ಸೇವಿಸುತ್ತಿಪ್ಪಾತನೆ ಶಿವಭಕ್ತ. ಸಾಕ್ಷಿ: ʼಅರ್ಥಪ್ರಾಣಬ್ಥಿಮಾನಂ ಚ ಗುರೌ ಲಿಂಗೇ ತು ಜಂಗಮೇ |' ತಲ್ಲಿಂಗ ಜಂಗಮದಲ್ಲಿ ಧನವಂಚಕನಾಗಿ ಮಾಡುವ ಭಕ್ತಿಯ ತೆರನೆಂತೆಂದರೆ : ನರಿಯ ಕೂಗು ಸ್ವರ್ಗಕ್ಕೆ ಮುಟ್ಟುವುದೆ? ಹರಭಕ್ತಿಯಲ್ಲಿ ನಿಜವನರಿಯದೆ ಮಾಡಿದ ಭಕ್ತಿ ಸಯಿಧಾನದ ಕೇಡು ಕಾಣಾ ಪರಮ[ಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ].