Index   ವಚನ - 1    Search  
 
ತನುವಿಕಾರದಿಂದ ಸವೆದು ಸವೆದು, ಮನವಿಕಾರದಿಂದ ನೊಂದು ಬೆಂದವರೆಲ್ಲ ಬೋಳಾಗಿ. ದಿನ ಜವ್ವನಂಗಳು ಸವೆದು ಸವೆದು, ಜಂತ್ರ ಮುರಿದು ಗತಿಗೆಟ್ಟವರೆಲ್ಲ ಬೋಳಾಗಿ, ಮಂಡೆಯ ಬೋಳಿಸಿಕೊಂಡು ಬೋಳಾದ ಬಳಿಕ, ಹೊನ್ನು ಹೆಣ್ಣು ಮಣ್ಣಿಗೆರಗದುದೆ ಬಾಳು. ಸಕಲವಿಷಯದ ದಾಳಿಗೆ ಸಿಲುಕದುದೆ ಬಾಳು. ಇದಲ್ಲದೆ ಗತಿಗೆಟ್ಟು, ಧಾತುಗೆಟ್ಟು, ವೃಥಾ ಬೋಳಾದ ಬಾಳು ಲೋಕದ ಗೋಳಲ್ಲವೆ ಹೇಳು, ನಿಜಮುಕ್ತಿ ರಾಮೇಶ್ವರಾ.