Index   ವಚನ - 7    Search  
 
ಗುಣ ರೂಪಂಗಳ ಮೀರಿ ಶಿಷ್ಯಜನ ಮನೋಜ್ಞಾನಾಂಧಕಾರಕ್ಕೆ ಸೂರ್ಯೋದಯನಾಗಿ, ಲಲಾಟಲೋಚನ ಚಂದ್ರಕಳಾ ದಶಭುಜಂಗಳಂ ಜ್ಞಾನ ಶಾಂತಿ ಬಾಹುದ್ವಯಂಗಳಲ್ಲಿ ಪುದುಂಗೊಳಿಸಿ, ಭುವನ ಹಿತಾರ್ಥಮಾಗಿ ದೇಶಿಕಸ್ವರೂಪಮಂ ತಾಳ್ದು, ದೀಕ್ಷಾ ಶಿಕ್ಷಾ ಸ್ವಾನುಭಾವಾತ್ಮಕನಾಗಿ ಚರಿಪ ಷಟ್ಸ್ಥಲಬ್ರಹ್ಮ ಪ್ರಬೋಧಕ ಪ್ರಭು ಪ್ರಸನ್ನಮೂರ್ತಿ ಪರಮ ಶಿವಲಿಂಗ ಭಕ್ತಜನಾಂತರಂಗ. ಮನ್ಮಾನಸಾಂಭೋಜ ಭೃಂಗ ತವ ಪಾದ ಪಲ್ಲವಂಗಳೆ ಮನೋವಚನಕಾಯಂಗಳಿಂ ತ್ರಿವಾರಂ ಶರಣು ಶರಣು.