Index   ವಚನ - 28    Search  
 
ಇಂತು ತತ್ವಮಸಿ ಎಂಬ ಮಹಾವಾಕ್ಯರ್ಥಂಗಳೊಳ್ತತ್ತೆನೆ ಲಿಂಗಂ. ತ್ವಮೆನೆಯಂಗಮಸಿಯೆನೆಲಿಂಗಾಂಗೈಕ್ಯಂ. ಮತ್ತಂ, ಪೂವೋಕ್ತಮಾದ ತ್ವಂ ತದಸಿ ತತ್ವಮಸಿ ಇವರ ಶಬ್ದವಾಚ್ಯಮಾದಂಗಲಿಂಗೈಕ್ಯ ಪ್ರತಿಪಾದಿತ ಮಹಾವಾಕ್ಯ ಸೂತ್ರಾಂತರ್ಗತಮಾದಂಗಸ್ಥಲಂಗಳ ನಾಲ್ವತ್ತನಾಲ್ಕಕ್ಕಂ ಲಿಂಗಸ್ಥಲಂಗಳೈವತ್ತೇಳಕ್ಕಂ ನೂರೊಂದು ಸ್ಥಲ ಗಣನೆಯಾದುದಾಯುಭಯಾತ್ಮಕಂ ನೀನೆ ಗಡ, ಪರಮಶಿವಲಿಂಗ ಪ್ರಚುರಾನುಕಂಪ ತರಂಗ.