Index   ವಚನ - 29    Search  
 
ಮತ್ತಮೀ ಮಹಾವಾಕ್ಯಾರ್ಥಕ್ಕೆ ವೇದದೊಳ್ ಶಿವ ಜೀವೈಕ್ಯಮೆಂದು ತದನುಸಾರಾಗಮದೊಳ್ ಶಿವ ಶಕ್ತೈಕ್ಯಮೆಂದು- ಮುಳಿದೆಡೆಯೊಳಾ ಪುರುಷ ಪ್ರಕೃತೈಕ್ಯಮೆಂದು ಪರ್ಯಾಯಮಾಗಿರಲದೆಲ್ಲಮುಂ ನೀನಲ್ಲದನ್ಯಥಾ ಭಾವಮಿಲ್ಲವಯ್ಯಾ, ಪರಮ ಶಿವಲಿಂಗೇಶ್ವರ, ಭಾಸ್ವರ ಕಲ್ಯಾಣ ಗುಣೋತ್ಕರ.