ಮತ್ತೆಯುಂ,
ಸರ್ವಜ್ಞಶಕ್ತಿ ತೃಪ್ತಿಶಕ್ತಿಯನಾದಿಪ್ರಬೋಧಶಕ್ತಿ
ಸ್ವತಂತ್ರಶಕ್ತಿಯಲುಪ್ತಶಕ್ತಿಯನಂತಶಕ್ತಿಗಳೆಂಬಿವೆ
ನಿನ್ನ ಕಾರಣ ಷಡಂಗಂ.
ಬಳಿಕ್ಕಂ, ಭಕ್ತಿ ಕರ್ಮಕ್ಷಯ
ಬುದ್ಧಿ ವಿಚಾರ ದರ್ಪ ಸಂಕ್ಷಯ
ಸಮ್ಯಜ್ಞಾನಂಗಳೆಂಬಿವೆ ನಿನ್ನ ಸೂಕ್ಷ್ಮ ಷಡಂಗಮಿನ್ನುಂ
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯರೆಂಬಿವೆ
ನಿನ್ನ ಸ್ಥೂಲ ಷಡಂಗವಯ್ಯಾ,
ಪರಮಶಿವಲಿಂಗೇಶ್ವರಾ, ಪವಿತ್ರ ಕೈವಲ್ಯಾಧೀಶ್ವರ.