Index   ವಚನ - 74    Search  
 
ಬಳಿಕ್ಕಮಗ್ನಿಮಂಡಲದ ವರುಣದಿಕ್ಕಿನೇಕದಳದಲ್ಲಿ ಲಕಾರಮಂ ಅದರಾಚೆಯ ಚಂದ್ರಮಂಡಲದ ದಳದ್ವಯದಲ್ಲಿ ವರುಣದಳದೊಳಗೆ ಞಕಾರಮಂ ವರುಣ ವಾಯುಗಳಪದಿಕ್ಕಿನ ದಳದಲ್ಲಿ ಙಕಾರಮಂ ಅದರಾಚೆಯ ಸೂರ್ಯಮಂಡಲದ ದಳತ್ರಯದಲ್ಲಿ ವರುಣ[ದಳ]ದೊಳಗೆ ಡಕಾರಮಂ ವರುಣ ವಾಯುಗಳಪದಿಕ್ಕಿನ ದಳದ್ವಯದಲ್ಲಿ ಢಕಾರ ಣಕಾರಂಗಳನನುಗೊಳಿಸಿ ಭಾವಿಪುದೆಂದೆಯಯ್ಯಾ, ಪರಮ ಶಿವಲಿಂಗ ಫಣೀಶ್ವರ ಭೂಷಿತಾಂಗ.