Index   ವಚನ - 75    Search  
 
ಬಳಿಕ್ಕೆಯುಮಗ್ನಿಮಂಡಲದ ವಾಯುದಿಕ್ಕಿನೇಕದಳದಲ್ಲಿ ರಕಾರಮನದರಾಚೆಯ ಚಂದ್ರಮಂಡಲದ ವಾಯುದಿಕ್ಕಿನ ದಳದ್ವಯದಲ್ಲಿ ವಾಯುದಳದೊಳಗೆ ಎಕಾರಮಂ, ವಾಯು ಕುಬೇರರಪದಿಕ್ಕಿನ ದಳದ್ವಯದಲ್ಲಿ ಐಕಾರಮನದರಾಚೆಯ ಸೂರ್ಯಮಂಡಲದ ದಳತ್ರಯದಲ್ಲಿ ವಾಯುದಳದೊಳಗೆ ತಕಾರಮಂ, ವಾಯು ಕುಬೇರರಪದಿಕ್ಕಿನ ದಳದ್ವಯದಲ್ಲಿ ಥಕಾರ ದಕಾರಂಗಳಂ ಬರೆದು ಭಾವಿಪುದೆಂದೆಯಯ್ಯಾ, ಪರಮ ಶಿವಲಿಂಗೇಶ್ವರ ಪ್ರಚುರ ಕಲ್ಯಾಣ ಗುಣಾಕರ.