ಮತ್ತೆಯುಮಗ್ನಿಮಂಡಲದ ಕುಬೇರದಿಕ್ಕಿನೇಕದಳದಲ್ಲಿ
ಯಕಾರಮನದರಾಚೆಯ ಚಂದ್ರಮಂಡಲ ದಳದ್ವಯದಲ್ಲಿ
ಕುಬೇರದಳದೊಳಗೆ ಓಕಾರಮಂ,
ಕುಬೇರೀಶಾನರಪದಿಕ್ಕಿನ ದಳದಲ್ಲಿ
ಔಕಾರಮ ನದರಾಚೆಯ ಸೂರ್ಯಮಂಡಲದ ದಳತ್ರಯದಲ್ಲಿ
ಕುಬೇರದಳದೊಳಗೆ ಧಕಾರಮಂ,
ಕುಬೇರೀಶಾನರಪದಿಕ್ಕಿನ ದಳದ್ವಯದಲ್ಲಿ
ನಕಾರಂಗಳನುದ್ಧರಿಪುದೆಂದು
ನಿರವಿಸಿದೆಯಯ್ಯಾ, ಪರಮ ಶಿವಲಿಂಗಯ್ಯ.
Art
Manuscript
Music
Courtesy:
Transliteration
Matteyumagnimaṇḍalada kubēradikkinēkadaḷadalli
yakāramanadarāceya candramaṇḍala daḷadvayadalli
kubēradaḷadoḷage ōkāramaṁ,
kubērīśānarapadikkina daḷadalli
aukārama nadarāceya sūryamaṇḍalada daḷatrayadalli
kubēradaḷadoḷage dhakāramaṁ,
kubērīśānarapadikkina daḷadvayadalli
nakāraṅgaḷanud'dharipudendu
niravisideyayyā, parama śivaliṅgayya.
ಸ್ಥಲ -
ಇಂತೀ ದಳಚಕ್ರನ್ಯಾಸಮುಕ್ತಂ