Index   ವಚನ - 77    Search  
 
ಬಳಿಕ್ಕೆಯುಮಗ್ನಿ ಮಂಡಲದೀಶಾನದಿಕ್ಕಿನೇಕದಳದಲ್ಲಿ ಮಕಾರಮ ನದರಾಚೆಯ ಚಂದ್ರಮಂಡಲದಳದ್ವಯದಲ್ಲಿ ಈಶಾನ್ಯದಳದೊಳಗೆ ಅಂಕಾರಮಂ ಈಶಾನೇಂದ್ರರಪದಿಕ್ಕಿನ ದಳದಲ್ಲಿ ಅಃಕಾರಮಂ, ಅದರಾಚೆಯ ಸೂರ್ಯಮಂಡಲದ ದಳತ್ರಯದಲ್ಲಿ ಈಶಾನ್ಯದಳದೊಳಗೆ ಫಕಾರಮ- ನೀಶಾನೇಂದ್ರಪದಿಕ್ಕಿನ ದಳದ್ವಯದಲ್ಲಿ ಬಕಾರಂಗಳನಿಟ್ಟು ಭಾವಿಪುದೆಂದೆಯಯ್ಯಾ, ಪರಮ ಶಿವಲಿಂಗೇಶ್ವರ ತ್ರಿಭುವನಾಧೀಶ್ವರ.