ಇಂತು ವರ್ಗತ್ರಯ ನಿರೂಪಣಾನಂತರದಲ್ಲಿ,
ಚಕ್ರಕಮಲಕರ್ಣಿಕಾದಿ ಮಂಡಲತ್ರಯದೊಳಗೆ
ನ್ಯಸ್ತವರ್ಗಂಗಳಲ್ಲಿ, ಮೊದಲ
ಸೂಕ್ಷ್ಮಕರ್ಣಿಕಾ ನ್ಯಸ್ತವರ್ಗಮಂ ನಿರೂಪಿಸುವೆನೆಂತೆನೆ-
ನಾದವೆಂದು ಗುಹ್ಯವೆಂದು ಪರವೆಂದು
ಜೀವವೆಂದು ದೇಹಿಯೆಂದು
ಭೂತವೆಂದು ಪಂಚಮವೆಂದು
ಸಾಂತವೆಂದು ತತ್ವಾಂತವೆಂದು
ಭೂತಾಂತವೆಂದು ಶಿವಾರ್ಣವೆಂದು
ಶೂನ್ಯವೆಂದವ್ಯಯವೆಂದೀ
ಪದಿಮೂರ್ಪೆಸರ್ಕರ್ಣಿಕಾನ್ಯಸ್ತ ಹಕಾರಕ್ಕೆಂದು
ನಿರೂಪಿಸಿಸಿದೆಯಯ್ಯಾ, ಪರಾತ್ಪರ ಪರಮ ಶಿವಲಿಂಗೇಶ್ವರ.
Art
Manuscript
Music
Courtesy:
Transliteration
Intu vargatraya nirūpaṇānantaradalli,
cakrakamalakarṇikādi maṇḍalatrayadoḷage
n'yastavargaṅgaḷalli, modala
sūkṣmakarṇikā n'yastavargamaṁ nirūpisuvenentene-
nādavendu guhyavendu paravendu
jīvavendu dēhiyendu
bhūtavendu pan̄camavendu
sāntavendu tatvāntavendu
bhūtāntavendu śivārṇavendu
śūn'yavendavyayavendī
padimūrpesarkarṇikān'yasta hakārakkendu
nirūpisisideyayyā, parātpara parama śivaliṅgēśvara.
ಸ್ಥಲ -
ಇಂತೀ ದಳಚಕ್ರನ್ಯಾಸಮುಕ್ತಂ