Index   ವಚನ - 89    Search  
 
ಮತ್ತಂ, ಶಿವನೆ ಜೀವನಾದೊಡೆ ಜೀವಂಗುಂಟಾದ ಜನನಾದಿ ದೋಷಂಗಳಿವಂಗುಂಟಾದಪುದಲಾಯೆನೆ ಸಾಗರ ತರಂಗ ನ್ಯಾಯದಂತಭೇದಂ. ಕಡಲುದಕಂ ತೃಣ ಕಣ ಜಲಮುಮೇಕಮಾದೊಡಂ ಕಡಲ ಗಂಭೀರತೆ ತೃಣ ಕಣ ಜಲಕ್ಕಿಲ್ಲಮಂತೆ ಶಿವಂಗುಂಟಾದ ಗಂಭೀರ ಮಹತ್ವಂಗಳ್ಬ್ರಹ್ಮಾದಿ ಸ್ತಂಭಪರ್ಯಂತಮಾದ ಕಲ್ಪಿತಜೀವಜಾಲಕ್ಕಿಲ್ಲಮೆಂಬುದೆ ನಿಶ್ಚಿತಾರ್ಥಮಕ್ಕು ಮದಾದೊಡಂ ಶಿವಂ ಪರಿಪೂರ್ಣನಪ್ಪುದರಿಂ ಮುನ್ನಿನಂತೆ ಸಾಗರ ತರಂಗ ನ್ಯಾಯದಿಂ ಜೀವನಾದನದು ಕಾರಣದಿಂ ಸದಾಶಿವಾದ್ಯವನಿಪರ್ಯಂತಮಾದ ಜಗತ್ತೇ ದೇಹವನುಳ್ಳ ಕಾರಣಂ ದೇಹಿಯಾ ಫೇನೂರ್ಮಿಕಣಗಳ್ತನ ಗಿರ್ದೊಡುಲುಹಿಲ್ಲದ ಸಮುದ್ರದಂತೆ, ಶಿವಂ ದೇಹವಿರ್ದೊಡಂ ದೇಹವಿಲ್ಲದವನೆಂದೇಬೋಧಿಸಿದೆಯಯ್ಯಾ, ಪರಮ ಶಿವಲಿಂಗ ಸ್ಫಟಿಕರುಚಿ ಸನ್ನಿಭಾಂಗ.