Index   ವಚನ - 90    Search  
 
ಬಳಿಕ್ಕಮಾ ಶಿವಸದಸದ್ವಸ್ತ ಸ್ವರೂಪಮುಂ ತಾನೆಯಾಗಿ ಶುದ್ಧ ಸದ್ರೂಪನಾದ ಕಾರಣಂ, ಬೂತಮೆನಿಪಾನಾಕಾಶದ್ವಾಯು ರೀತ್ಯಾದಿ ಶ್ರುತ್ಯುಕ್ತ ಕ್ರಮಸೃಷ್ಟಿಯ ಪಂಚಭೂತದ ಮೊದಲಾಕಾಶಮಯವಾದ. ಮತ್ತೆಯುಂ ಪಂಚಬ್ರಹ್ಮಮಯವಾದ. ಸದಾಶಿವನಪ್ಪುದರಿಂದೆಯುಂ ಪಂಚಮವಾದ. ಬಳಿಕ್ಕಂ, ಸೃಷ್ಟಿವರ್ಗಕ್ರಮದ ಶಕ್ತಿ ಬೀಜವಾದ. ಬಿಂದುಸ್ವರೂಪ ಸಕಾರದುಪರಿಯಲ್ಲಿರುತ್ತಿರ್ದ ಕಾರಣಂ ಶಿವಂ ಸಾಂತವೆನಿಪಂ. ಮತ್ತಂ, ನಿವೃತ್ತಿ ಕಲಾದಿ ಶಿವತತ್ವಾಂತವಾದ, ತತ್ವಾಶ್ರಯವಾದ ಕಾರಣಂ ಶಿವಂ ತತ್ವಾಂತನೆನಿಪನೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗೇಶ್ವರ ಪ್ರಸಿದ್ಧ ಮಹಿಮಾಕರ.