Index   ವಚನ - 98    Search  
 
ಮತ್ತಮಾ ಶಿವಾತ್ಮಕ ಪ್ರಸಾದಮಂತ್ರವಾದೊಡೈದು ತೆರದಿಂ ಪೇಳಲ್ಪಟ್ಟುದೆಂತೆನೆ- ಮೊದಲ್ತಾನೆ ಶುದ್ಧಪ್ರಸಾದವೆರಡನೆಯದೆ ಮೂಲಪ್ರಸಾದಂ. ಮೂರನೆಯದೆ ತತ್ವಪ್ರಸಾದಂ. ನಾಲ್ಕನೆಯದೆ ಆದಿಪ್ರಸಾದ ವೈದನೆಯದೆ ಆತ್ಮಪ್ರಸಾದಮಿಂತಿವರೊಳ್ಮೊದಲ ಶುದ್ಧಪ್ರಸಾದಮೆಂತೆನೆ- ನಿರ್ದೋಷಮಾಗಿ ಶಿವನೆಂದುಕ್ತಮಾದ ನಾದ ಗುಹ್ಯ ಪರ ಜೀವ ದೇಹಿ ಭೂತ ಪಂಚಮ ಸಾಂತ ತತ್ವಾಂತ ಭೂತತಾಂತ ಶಿವಾರ್ಣ ಶೂನ್ಯಾವ್ಯಯಂಗಳೆಂಬ ತ್ರಯೋದಶ ನಾಮಪರ್ಯಾಯಾಂಕಿತವಾಗಿ ಸಮಸ್ತ ಪ್ರಾಣಿಗಳಂತಸ್ಥಿತಮಾದ ಶಿವಬೀಜವೆ ಸರ್ವ ಕಾರಣ ಕಾರಣವೆನಿಸಿದ ಶುದ್ಧಪ್ರಸಾದವೆನಿಸುಗು ಮದೆ ಗುರುಮುಖದಿಂ ತನ್ನನರಿದಾತಂಗೆ ಭೋಗ ಮೋಕ್ಷಾದಿ ಸಕಲೈಶ್ವರ್ಯ ಸಿದ್ಧಿಗಳನೀವುದೆಂದೆಯಯ್ಯಾ, ಪರಮ ಶಿವಲಿಂಗ ನಿರಂತರ ಕೃಪಾಪಾಂಗ.