Index   ವಚನ - 105    Search  
 
ಇಂತು, ಪಂಚಭೌತಿಕವಾದೈವತ್ತಕ್ಕರವೆ ಜೀವಸಂಜ್ಞಿತಮಪ್ಪ ಸಾಂತಕ್ಕೆ ಪುರಾಷ್ಟಕಮೆನಿಸಿತ್ತು. ಮತ್ತಮೀ ಮೂಲಪ್ರಸಾದವೆ ಜೀವಪ್ರಸಾದವಾದುದು. ಬಳಿಕಂ, ಬ್ರಹ್ಮಾದಿ ತೃಣಂ ಕಡೆಯಾಗಿ ಚರಾಚರರೂಪವಾದ ಚಿತ್ಕಾರಣಮೆನಿಸಿ ಭೂತಭವಿಷ್ಯದ್ವರ್ತಮಾ[ನಾ]ತ್ಮಕವೆಲ್ಲವುಂ ಮೂಲಪ್ರಸಾದದಲ್ಲಿಯೆ ಸಾಗರ ತರಂಗ ನ್ಯಾಯದಿಂದಂತ-ರ್ಗತವಾದುದೆಂದು ನಿರೂಪಿಸಿದೆಯ್ಯಾ, ಪರಶಿವಲಿಂಗೇಶ್ವರ ಗಿರಿಜೋತ್ಸವಾಬ್ಧಿನಿಶಾಕರ.