Index   ವಚನ - 107    Search  
 
ಈ ತೆರದಿಂ ತತ್ವಪ್ರಸಾದನಿರೂಪಣಾನಂತರದಲ್ಲಿ ಆದಿಪ್ರಸಾದಮಂ ಪೇಳ್ವೆನೆಂತೆನೆ- ಮೊದಲ ರಾಜಸವರ್ಗವೆನಿಸುವ ಚಂದ್ರಮಂಡಲದಿಂದ್ರದಳದಲ್ಲಿ ನ್ಯಸ್ತವಾದಕಾರಕ್ಕೆ ಹಕಾರದಲ್ಲಿ ಕೂಡಿಸೆ ಹೌ ಎಂದಾಯಿತ್ತದನಾಧಾರಾಧೇಯ ಸಂಜ್ಞಿತನಾದ ಬಿಂದುವಿನೊಡನೆ ಕೂಡಿಸೆ ಪೂರ್ವೋಕ್ತ ತಾಂತ್ರಿಕ ಮೂಲಪ್ರಸಾದಮಾದೊಡಂ ತನ್ನ ಔಯೆಂದಾದಿಶಕ್ತಿಯೊಡನೆ ಕೂಡಿಸೆ ಹೌಂ ಎಂದೆನಿಸಿ ಶಿವಮಯವಾದಾದಿಪ್ರಸಾದವಾದುದೆಂದು ನಿರವಿಸಿದೆಯಯ್ಯಾ, ಪರಶಿವಲಿಂಗ ಪರಿಪೂರ್ಣ ಪ್ರಭಾಂಗ.