ನಾದಸಂಜ್ಞಿತವಾದ ಹಕಾರದ ಮೊದಲ ಹ ಸ್ ಎಂಬುದನುದ್ಧರಿಸಿ
ಬಿಂದು ಸಂಜ್ಞಿತವಾದ ರ್ ಎಂಬುದಂ ಕೂಡಿಸೆ ಸ್ರ್ ಎನಿಸಿತದಂ
ಮಾಯಾಸಂಜ್ಞಿಕವಾದಿಕಾರದೊಳ್ಮೇಳನಂಗೆಯ್ದು,
ಬಿಂದು ನಾದ ಸಂಜ್ಞಿಕವಾದ ಸೊನ್ನೆಯೊಳ್ಕೊಡೆ ಸ್ತ್ರಿಂ ಎಂಬ
ದ್ವೀತಿಯ ಶಕ್ತಿಬೀಜವೆನಿಸಿತ್ತು.
ಮತ್ತಂ, ತತ್ವಾಂತಸಂಜ್ಞಿಕವಾದ ಹಕಾರದ ಮುಂದಣ ಸ್
ಎಂಬುದನುದ್ಧರಿಸಿ,ಧರಾಸಂಜ್ಞಿಕವಾದೂಕಾರವಂ
ವಹ್ನಿ ಸಂಜ್ಞಿತವಾದ ರ್ ಎಂಬುದನುಂ,
ಬಿಂದು ನಾದಸಂಜ್ಞಿತವಾದ ಸೊನ್ನೆಯುಮಂ ಮಿಶ್ರಿಸೆ
ಸ್ರೂಂ ಎಂಬ ಮೂರನೆಯ ಶಕ್ತಿಬೀಜವೆನಿಸಿತ್ತು.
ಜೀವ ಸಂಜ್ಞಿಕವಾದ ಹಕಾರದ ಮುಂದಣ ಸ್ ಎಂಬುದಂ
ವನ್ಹಿ ಸಂಜ್ಞಿಕವಾದ ರ್ ಎಂಬುದಂ ಕೂಡಿಸೆ ಸ್ರ್ ಎನಿಸಿತ್ತದಂ
ದ್ವಾದಶ ಸಂಜ್ಞಿಕವಾದೈಕಾರದೊಳ್ಬೆರಸಿ
ಬಿಂದು ನಾದ ಸಂಜ್ಞಿಕವಾದ ಸೊನ್ನೊಯೊಳೊಂದಿಸೆ
ಸ್ರೈಂ ಎಂಬ ನಾಲ್ಕನೆಯ ಶಕ್ತಿಬೀಜಂ.
ಭೂತ ಸಂಜ್ಞಿಕವಾದ ಹ ಕಾರದ ಮುಂದಣ ಸ್ ಎಂಬುದು
ವನ್ಹಿ ಸಂಜ್ಞಿಕವಾದ ರ್ ಎಂಬುದರೊಡನೆ ಕೂಡೆ ಸ್ರ ಎನ್ನಿಸಿತ್ತದು
ಸ್ವರತ್ರಯೋದಶದೊಡನೆ ಕೂಡೆ ಸ್ರೌ ಎನಿಸಿ
ಬಿಂದು ನಾದ ಸಂಜ್ಞಿಕವಾದ ಸೊನ್ನೆಯೊಡವೆರೆಯೆ
ಸ್ರೌಂ ಎಂಬ ಬೀಜವೈದನೆಯ ಶಕ್ತಿ.
ಈ ಶಕ್ತಿಬೀಜವಂ ಶಿವಾಂಗ ಬೀಜವಹ ಹಾಂಗುದ್ಧರಿಸೂದೀ
ಪಂಚಶಕ್ತಿಗಳಲ್ಲಿಯುಮಾ ಶಕ್ತಿಯೆ ಮೊದಲಶಕ್ತಿ.
ಇವರ ಬೀಜಶಕ್ತಿಗಳವೆಂತೆನೆ-
ತರದಿಂದೆ ಸ್ರಾಂ ಉಮೆ ಸ್ತ್ರೀಂ ಅಂಬಿಕೆ ಸ್ರೂಂ ಗಣಾನಿ
ಸ್ರೈಂ ಈಶ್ವರಿ ಸ್ರೌಂ ಮನೋನ್ಮನಿ
ಇಂತೈದು ಶಕ್ತಿಗಳ್ಯಿವಾಂಗಂಗಳ್ಮನೋನ್ಮನ್ಯಗಳೊಂದೊಂದರ
ದಶಾಂಗಳೊಂದೊಂದೆಂದರುಪಿದೆಯಯ್ಯಾ,
ಮುನಿಹೃದಯ ಶಯ್ಯ ಮಹಾ ಗುರು ಪರಶಿವಲಿಂಗಯ್ಯ.
Art
Manuscript
Music
Courtesy:
Transliteration
Nādasan̄jñitavāda hakārada modala ha s embudanud'dharisi
bindu san̄jñitavāda r embudaṁ kūḍise sr enisitadaṁ
māyāsan̄jñikavādikāradoḷmēḷanaṅgeydu,
bindu nāda san̄jñikavāda sonneyoḷkoḍe striṁ emba
dvītiya śaktibījavenisittu.
Mattaṁ, tatvāntasan̄jñikavāda hakārada mundaṇa s
embudanud'dharisi,dharāsan̄jñikavādūkāravaṁ
vahni san̄jñitavāda r embudanuṁ,
bindu nādasan̄jñitavāda sonneyumaṁ miśrise
srūṁ emba mūraneya śaktibījavenisittu.
Jīva san̄jñikavāda hakārada mundaṇa s embudaṁ
vanhi san̄jñikavāda r embudaṁ kūḍise sr enisittadaṁ
dvādaśa san̄jñikavādaikāradoḷberasi
bindu nāda san̄jñikavāda sonnoyoḷondise
sraiṁ emba nālkaneya śaktibījaṁ.
Bhūta san̄jñikavāda ha kārada mundaṇa s embudu
vanhi san̄jñikavāda r embudaroḍane kūḍe sra ennisittadu
svaratrayōdaśadoḍane kūḍe srau enisi
bindu nāda san̄jñikavāda sonneyoḍavereye
srauṁ emba bījavaidaneya śakti.
Ī śaktibījavaṁ śivāṅga bījavaha hāṅgud'dharisūdī
pan̄caśaktigaḷalliyumā śaktiye modalaśakti.
Ivara bījaśaktigaḷaventene-
taradinde srāṁ ume strīṁ ambike srūṁ gaṇāni
sraiṁ īśvari srauṁ manōnmani
intaidu śaktigaḷyivāṅgaṅgaḷmanōnman'yagaḷondondara
daśāṅgaḷondondendarupideyayyā,
munihr̥daya śayya mahā guru paraśivaliṅgayya.
ಸ್ಥಲ -
ಇಂತೀ ದಳಚಕ್ರನ್ಯಾಸಮುಕ್ತಂ