ಬಳಿಕಮೀ ಪಂಚವಿಂಶತಿ ಬ್ರಹ್ಮಂಗಳ ಲಕ್ಷಣಮಂ ಪೇಳ್ವೆನೆಂತೆನೆ-
ಈಶಾನಾಮೀಶ್ವರಂ ಬ್ರಹ್ಮಂ ಶಿವಂ ಸದಾಶಿವಗೀ
ಪಂಚಮೂರ್ತ್ಯಾಕೃತಿಗಳಾವಾವವುಂಟವೆ
ಪಂಚ ಪ್ರಣವಾಕೃತಿಗಳಿವೆ ಸದ್ಯಾದಿ ಪಂಚಬ್ರಹ್ಮಂಗಳವರ
ಲಕ್ಷಣಮೆಂತನೆ ಪೇಳ್ವೆಂ-
ಕರ್ತೃಸಾದಾಖ್ಯ, ಕರ್ಮಸಾದಾಖ್ಯ, ಮೂರ್ತಿಸಾದಾಖ್ಯ,
ಅಮೂರ್ತಿಸಾದಾಖ್ಯ, ಶಿವಸಾದಾಖ್ಯಂಗಳವರ ಭಾವಮಂ
ತರದಿಂ ಸದ್ಯಾದಿಗಳಲ್ಲಿ ತಿಳಿವುದು.
ಇಂತು ತಿಳಿದೊಡೆ ಪರಿವಿಡಿಯಿಂ ಪಂಚಪ್ರಸಾದಂಗಳ
ಕುರುಪುಗಳುಂಟಾದಪವೆಂದು
ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
Art
Manuscript
Music
Courtesy:
Transliteration
Baḷikamī pan̄cavinśati brahmaṅgaḷa lakṣaṇamaṁ pēḷvenentene-
īśānāmīśvaraṁ brahmaṁ śivaṁ sadāśivagī
pan̄camūrtyākr̥tigaḷāvāvavuṇṭave
pan̄ca praṇavākr̥tigaḷive sadyādi pan̄cabrahmaṅgaḷavara
lakṣaṇamentane pēḷveṁ-
kartr̥sādākhya, karmasādākhya, mūrtisādākhya,
amūrtisādākhya, śivasādākhyaṅgaḷavara bhāvamaṁ
taradiṁ sadyādigaḷalli tiḷivudu.
Intu tiḷidoḍe pariviḍiyiṁ pan̄caprasādaṅgaḷa
kurupugaḷuṇṭādapavendu
niravisideyayyā, paraśivaliṅgayya.
ಸ್ಥಲ -
ಇಂತೀ ದಳಚಕ್ರನ್ಯಾಸಮುಕ್ತಂ