ಮತ್ತಮೀ ಷಡಂಗಮಂತ್ರಗಳೆ
ಬೇರೆ ಬೇರೆಯೊಂದೊಂದರೊಳಾರಾರು
ತೆರನುಂಟುವಾವಾವವೆನೆ ಪೇಳ್ವೆಂ
ಹ್ರಾಂ ಎಂಬುದು ಹೃದಯಮಂತ್ರಂ.
ಹ್ರೀಂ ಎಂಬುದು ಶಿರೋಮಂತ್ರಂ.
ಹ್ರೂಂ ಎಂಬುದು ಶಿಖಾಮಂತ್ರಂ.
ಹ್ರೈಂ ಎಂಬುದು ಕವಚಮಂತ್ರಂ.
ಹ್ರೌಂ ಎಂಬುದು ನೇತ್ರಮಂತ್ರಂ.
ಹ್ರಃ ಎಂಬುದಸ್ತ್ರಮಂತ್ರಂ.
ಇವಾರುಂ ಶಿವಾಂಗ ಮಂತ್ರಂ.
ಹೃದಯಾದ್ಯಸ್ತ್ರಾಂತಮಾದ ಷಡಂಗಮಂತ್ರಗಳ
ಚತುರ್ಥಾಂತಮಾಗಿಯುಂ ನಮಸ್ಕಾರಾದಿ
ಷಟ್ಟಲ್ಲವುಚ್ಚರಿಪಂದವೆಂತೆನೆ
ನಮಃ ಸ್ವಾಹಾ ವಷಟ್ ಹುಂ ವೌಷಟ್ ಫಟ್
ಎಂಬಿವು ಷಟ್ಟಲ್ಲವಂಗಳ್.
ಇವರುದಾಹರಣಂ ಓಹ ಹ್ರಾಂ ಹೃದಯಾಯ ನಮಃ
ಓಂ ಹ್ರೀಂ ಶಿರಸೆ ಸ್ವಾಹಾ, ಓಂ ಹ್ರೂಂ ಶಿಖಾಯೈ ವಷಟ್
ಓಂ ಹ್ರೈಂ ಕವಚಾಯ ಹುಂ,
ಓಂ ಹ್ರೌಂ ನೇತ್ರತ್ರಯಾಯ ವೌಷಟ್
ಓಂ ಹ್ರಃ ಅಸ್ತ್ರಾಯ ಫಟ್
ಎಂಬ ಷಟ್ಪಲ್ಲವಂಗೂಡಿದುದೇ ಶಿವಾಂಗಮಂತ್ರವೆಂದು
ನಿರವಿಸಿದೆಯಯ್ಯಾ,ಪರಶಿವಲಿಂಗಯ್ಯ.
Art
Manuscript
Music
Courtesy:
Transliteration
Mattamī ṣaḍaṅgamantragaḷe
bēre bēreyondondaroḷārāru
teranuṇṭuvāvāvavene pēḷveṁ
hrāṁ embudu hr̥dayamantraṁ.
Hrīṁ embudu śirōmantraṁ.
Hrūṁ embudu śikhāmantraṁ.
Hraiṁ embudu kavacamantraṁ.
Hrauṁ embudu nētramantraṁ.
Hraḥ embudastramantraṁ.
Ivāruṁ śivāṅga mantraṁ.
Hr̥dayādyastrāntamāda ṣaḍaṅgamantragaḷa
Caturthāntamāgiyuṁ namaskārādi
ṣaṭṭallavuccaripandaventene
namaḥ svāhā vaṣaṭ huṁ vauṣaṭ phaṭ
embivu ṣaṭṭallavaṅgaḷ.
Ivarudāharaṇaṁ ōha hrāṁ hr̥dayāya namaḥ
ōṁ hrīṁ śirase svāhā, ōṁ hrūṁ śikhāyai vaṣaṭ
ōṁ hraiṁ kavacāya huṁ,
ōṁ hrauṁ nētratrayāya vauṣaṭ
ōṁ hraḥ astrāya phaṭ
emba ṣaṭpallavaṅgūḍidudē śivāṅgamantravendu
niravisideyayyā,paraśivaliṅgayya.
ಸ್ಥಲ -
ಇಂತೀ ದಳಚಕ್ರನ್ಯಾಸಮುಕ್ತಂ