Index   ವಚನ - 171    Search  
 
ಬಳಿಕ್ಕಂ, ಷಡಂಗಮಂತ್ರನ್ಯಾಸಮಂ ಪೇಳ್ವೆನೆಂತೆನೆ- ಅಧಃಪಟ್ಟಿಕೆಯಲ್ಲಿ ಹ್ರಾಂ ಎಂಬ ಹೃದಯಮಂತ್ರಮಂ, ಅಧಃಕಂಜದಲ್ಲಿ ಹ್ರೀಂ ಎಂಬ ಶಿರೋಮಂತ್ರಮಂ, ಕಂಠದಲ್ಲಿ ಹ್ರೂಂ ಎಂಬ ಶಿಖಾಮಂತ್ರಮಂ, ಊರ್ಧ್ವಕಂಜದಲ್ಲಿ ಹ್ರೈಂ ಎಂಬ ಕವಚಮಂತ್ರಮಂ, ಊರ್ಧ್ವಪಟ್ಟಿಕೆಯಲ್ಲಿ ಹ್ರೌಂ ಎಂಬ ನೇತ್ರಮಂತ್ರಮಂ, ಆಜ್ಯಪ್ರಧಾರಿಕೆಯಲ್ಲಿ ಹ್ರಃ ಎಂಬ ಅಸ್ತ್ರಮಂತ್ರಮಂ, ಲಿಂಗದಲ್ಲಿ ನ್ಯಾಸಂಗೆಯ್ವುದೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.