Index   ವಚನ - 179    Search  
 
ಮತ್ತಮೀ ಷೋಡಶ ಸ್ವರಮೂರ್ತಿ ವಿವರಮೆಂ[ತೆ]ನೆ- ಅ ಶ್ರೀಕಂಠಂ, ಆ ಅನಂತಂ, [ಇ] ಸೂಕ್ಷ್ಮಂ, ಈ ತ್ರಿಮೂರ್ತಿ, ಉ ಅಮರೇಶ್ವರಂ, ಊ ದೀರ್ಘೇಶಂ, ಋ ಭಾರಭೂತಿ, ೠ ಅತಿದೀಶಂ ಌ ಸ್ಥಾಣುಕಂ, ೡ ಹರಂ, ಏ ಝಂಟೇಶ, ಐ ಜಾತುಕಂ, ಓ ಸದ್ಯೋಜಾತಂ, ಔ ಅನುಗ್ರಹೇಶ್ವರಂ, ಅಂ ಅಕ್ರೂರಂ, ಅಃ ಮಹಾಸೇನಂ. ಇಂತೀ ಮಹಾಲಿಂಗದೂರ್ಧ್ವಪಟ್ಟಿಕಾಖ್ಯ ವಿಶುದ್ಧಿ ಚಕ್ರಕೋಷ್ಠದಳನ್ಯಸ್ತ ಷೋಡಶಸ್ವರ ವಾಚ್ಯರಾದ ರುದ್ರರಿವರೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.