Index   ವಚನ - 190    Search  
 
ಇಂತೀ ಮಹಾಲಿಂಗದ ಪೂರ್ವೋಕ್ತ ಪಟ್ಚಕ್ರಂಗಳೆಲ್ಲ ಶಿವಚಕ್ರಂಗಳಲ್ಲಿ ನ್ಯಸ್ತವಾದ ಮುವತ್ತೈದು ವ್ಯಂಜನ. ಭಿಕ್ಷಾರವಾಚ್ಯರಾದ ಮುವತ್ತೈದು ರುದ್ರರೆ ತ್ರಿಶೂಲ ಕಪಾಲ ವರದಾಭಯಯುಕ್ತ ಕರಚತುಷ್ಟಯದಿಂ, ಕಟಕ ಮಕುಟಾದಿ ಭೂಷಣಂಗಳಿಂ. ದಿವ್ಯಗಂಧ ಮಾಲ್ಯ ದುಕೂಲಂಗಳಿಂ, ಶೋಭೆವಡೆದು ರಕ್ತಕಾಂತಿಯ ಕಾಯದ ಲಾವಣ್ಯವಂತರಾಗಿರ್ಕು ಮಂತೆಯೆ ಷೋಡಶ ಸ್ವರಾಕ್ಷರವಾಚ್ಯರಾದರುಮಿದೆ ತೆರದಿಂ ತಂತಮ್ಮ ನಿಜ ಲಾಂಛನ ಯುಕ್ತರಾಗಿರ್ದಪರೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.