Index   ವಚನ - 191    Search  
 
ಈ ತೆರದಿಂದೀ ಮಹಾಲಿಂಗದ ಪೂರ್ವೋಕ್ತವಾದಧಶ್ಚಕ್ರಂಗಳೆಲ್ಲ ಶಕ್ತಿ ಷಟ್ಚಕ್ರಂಗಳಲ್ಲಿ ನ್ಯಸ್ತವಾದ ಮೂವತ್ತೈದು ವ್ಯಂಜನ ಭಿಕ್ಷಾರವಾಚ್ಯರಾದ ಮೂವತ್ತೈದು ರುದ್ರಶಕ್ತಿಯರೆ, ನೀಲೋತ್ಪಲಾದಿಗಳಿಂದಲಂಕೃತ ಹಸ್ತಂಗಳಿಂ, ದಿವ್ಯದುಕೂಲ ಗಂಧಮಾಲ್ಯಾಭರಣಾದಿಗಳಿಂ, ಶೋಭೆವಡೆದು ವಿರಾಜಿಪರಾ ಷೋಡಶ ಸ್ವರಾಕ್ಷರ ವಾಚ್ಯಶಕ್ತಿಯರೆಲ್ಲರುಮಂತೆಯೆ ತಂತಮ್ಮ ನಿಜಲಾಂಛನಧಾರಿಣಿಯರಾಗಿರ್ಪರೀಯುಭಯ ಸ್ವರವ್ಯಂಜನಂಗಳೈದ ಶಕ್ತಿ ಬೀಜಂಗಳಾದ ಕಾರಣವಗ್ಯುಷ್ಣದಂತೇಕವಾಗಿ ಐವತ್ತೊಂದಕ್ಕರಂಗಳ ಗಣನೆಯಾದುದೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.