Index   ವಚನ - 202    Search  
 
ಮತ್ತಂ ಮಂತ್ರರೂಪಮೆಂತೆನೆ, ಮಂತ್ರದಾದಿಯೆ ಶಿರಸ್ಸು. ಮಂತ್ರದುಪರಿಯೆ ಮುಖ. ಮಂತ್ರ ಬಾಹ್ಯಂಗಳೆ ಉಭಯ ಪಾರ್ಶ್ವಂಗಳಾ- ಮಂತ್ರದಧೋಭಾಗವೆ ಆಸನಂ. ಮಂತ್ರದುಪರಿಯಲ್ಲಿಯ ವಾಮದಕ್ಷಿಣಚತುಃಪಾರ್ಶ್ವಂಗಳೆ ಚಕ್ಷು ಶ್ರೋತ್ರಂಗಳ್. ತನ್ಮಧ್ಯವೆ ನಾಸಿಕೆ. ತದೂರ್ಧ್ವವೆ ನೊಸಲ್ಬಿಂದುವೆ ಮಸ್ತಕಂ. ನಾದವೆ ಜಿಹ್ವೆ. ರ್ನಾಬ್ದವೆ ಶಬ್ದಮಾ ಶಬ್ದ ಸ್ಪಂದ ನಾ[ದ]ವದುದರವೆ ಓಷ್ಠವದು ಶಬ್ದದಿಂ ಭಿನ್ನವಾದ ಮುಖಾಂತರಯುತಮೆನಿಕುಂ. ಪ್ರಣವಾಂತದಲ್ಲಿಯುಂ, ಮಂತ್ರಪಲ್ಲವಾಂತದಲ್ಲಿಯು ಹಿಂಭಾಗದಲ್ಲಿಯು ಕೂಡಿರ್ಪುದೆ ಮಂತ್ರರೂಪವೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.