ಮರ್ಕಟಜ್ಞಾನದಿಂದ ಲಕ್ಷಿಸುವುದು;
ವಿಹಂಗ ಜ್ಞಾನದಿಂದ ಸಂಚರಿಸುವುದು.
ಪಿಪೀಲಿಕ ಜ್ಞಾನದಿಂದ ಧ್ಯಾನಿಸುವುದು,
ಒಂದೋ? ಮೂರೋ? ಎಂಬುದು ತಿಳಿದು,
ಖಾರ ಮಧುರ ಕಹಿ ಇವರೊಳಗೆ
ಬೆರೆದ ಸಾರ ಒ೦ದೊ? ಮೂರೊ? ಎಂಬುದ ತಿಳಿದು
ದರ್ಪಣದ ಇದಿರಿನಲ್ಲಿ ನಿಂದ ಗಜ ಅಜ ಪಶು ನರ
ಮುಂತಾಗಿ ತೋರುತ್ತಿಹ ಬಿಂಬಂ
ಮುಕುರ ಒಂದರಲ್ಲಿ ಸಂದಣಿಸುವಂತೆ
ನಿಜಾತ್ಮನ ಪಿಂಡಜ್ಞಾನಭೇದ
ಬಸವಣ್ಣಪ್ರಿಯ ಕೊಡಲಚೆನ್ನಸಂಗಮದೇವರಲ್ಲಿ
ಜ್ಞಾನಪಿಂಡೋದಯ.
Art
Manuscript
Music
Courtesy:
Transliteration
Markaṭajñānadinda lakṣisuvudu;
vihaṅga jñānadinda san̄carisuvudu.
Pipīlika jñānadinda dhyānisuvudu,
ondō? Mūrō? Embudu tiḷidu,
khāra madhura kahi ivaroḷage
bereda sāra o0do? Mūro? Embuda tiḷidu
darpaṇada idirinalli ninda gaja aja paśu nara
muntāgi tōruttiha bimbaṁ
mukura ondaralli sandaṇisuvante
nijātmana piṇḍajñānabhēda
basavaṇṇapriya koḍalacennasaṅgamadēvaralli
jñānapiṇḍōdaya.