Index   ವಚನ - 61    Search  
 
ಈ ಪ್ರಕಾರವಾಗಿ ಮಾಡುವ ಶಿವಲಿಂಗಪೂಜೆ ‘ಆತ್ಮಾರ್ಥ ಪೂಜೆ’ ಎಂದು ‘ಪರಾರ್ಥ ಪೂಜೆ’ ಎಂದು ಎರಡು ಪ್ರಕರವಾಗಿ ಹೇಳುತಿರ್ಪರು. ತನ್ನ ಆಚಾರ್ಯನಿಂದ ಕೊಡುವ ಲಿಂಗದಲ್ಲಿಯೂ ಭೂಮಿಯಲ್ಲಿಯೂ ತನ್ನ ಹೃದಯದಲ್ಲಿಯೂ ಮಾಡುವ ಪೂಜೆ ‘ಆತ್ಮಾರ್ಥ ಪೂಜೆ’ ಎಂದಾಯಿತ್ತು. ‘ಪರಾರ್ಥ ಪೂಜೆ’ಯಂ ಕೇಳು, ಅವುದಾನೊಂದು ಕಾರಣದಿಂದ ದೇವ ಋಷಿ ದಾನವ ಮಾನವರುಗಳಿಂದ ನಿರ್ಮಿಸಿ ಗ್ರಾಮ ಗಿರಿ ಗಂಹ್ವರ ವನ ಮೊದಲಾದವುಗಳಲ್ಲಿ ಪ್ರತಿಷ್ಠಿವಾದ ಶಿವಲಿಂಗ ಪೂಜೆ ‘ಪರಾರ್ಥ ಪೂಜೆ’ ಎಂದರಿಯಬೇಕು. ಆ ಪೂಜೆ ಎಲ್ಲಾ ಪ್ರಾಣಿಗಳಿಗೆಯೂ ಹಿತವ ಮಾಡುವಂಥದ್ದು. ಆ ಪ್ರಕಾರದಿಂದ ಹೇಳುವ ಎರಡು ಪ್ರಕಾರದ ಪೂಜೆ ಶಿವ ಬ್ರಾಹ್ಮಣನಿಂದಲೆ ಮಾಡತಕ್ಕಂಥದ್ದು. ಶಿವಾವರಣಗಳಲ್ಲಿ ಅಲ್ಲದೆ ಪೃಥಕ್ ಸ್ಥಾನ ಸ್ಥರದ ವಿಷ್ಣು ಆದ ಅನ್ಯ ದೇವತೆಗಳ ಪೂಜೆಯನು ಶುದ್ಧಶೈವನು ಸ್ವಾರ್ಥವಾಗಿಯೂ ಪರಾರ್ಥವಾಗಿಯೂ ಮಾಡಲಾಗದು. ಮರವೆಯ ದೆಸೆಯಿಂದಲೂ ಸಂಸಾರದ ಲೋಭದ ದೆಸೆಯಿಂದಲೂ ಎತ್ತಲಾನು ಮಾಡುವನಾದಡೆ ಆ ರಾಜ್ಯಕ್ಕೆಯೂ ಆ ರಾಜಗೆಯೂ ಕೇಡಪ್ಪುದು. ಈ ಅರ್ಥಮಂ ವ್ಯಕ್ತಮಂ ಮಾಡಿದಪಂ. ಇದಕ್ಕೆ ಸಾಕ್ಷಿ: ‘ಶಿವವರಣ ದೇವಾಶ್ಷ| ಸರ್ವಾಸಂಪೂಜಯೇದ್ಗುಹಾ| ಪೃಥಕ್ ಸ್ಥಾನ ಸ್ಥಿತ ಸ್ಸರ್ವಾನಾಚಾ ಏದನ್ಯ ದೇವತಾ|| ಎಂದುದಾಗಿ, ‘ಎಲೈ ಷಣ್ಮುಖನೆ, ಪರಾರ್ಥ ಪೂಜೆಯನು ಮಾಡುವ’ ಶುದ್ಧಶೈವನು ಸಮಸ್ತರಾದ ಶಿವಾವರಣಸ್ಥರಾದ ಬ್ರಹ್ಮವಿಷ್ಣಾದಿ ದೇವತೆಗಳನು ಶಿವನ ಪರಿವಾರ ಭಾವನೆಯಿಂ ಲೇಸಾಗಿ ಪೂಜಿಸುವುದು. ಶಿವಾವರಣಸ್ಥರಲ್ಲದೆ ಇದ್ದ ಬ್ರಹ್ಮವಿಷ್ಣು ಸಪ್ತ ಮಾತೃಕೆಯರು ಮೊದಲಾದ ದೈವಂಗಳನು ಪೂಜಿಸಲಾಗದು’ ಎಂದು ಷಣ್ಮುಖಂಗೆ ಈಶ್ವರನು ಬೋಧಿಸಿದನಯ್ಯ ಶಾಂತವೀರೇಶ್ವರಾ