Index   ವಚನ - 208    Search  
 
ರುದ್ರಕ್ಷೆಯ ಧರಿಸಿದವನು ಒಂದು ಕೋಟಿ ಗೋವುಗಳ ದಾನ ಕೊಟ್ಟ ಫಲವ ಪಡೆವನು. ಮರಣ ಕಾಲದಲ್ಲಿ ರುದ್ರಾಕ್ಷೆಯನು ಉದಕದೊಡನೆ ಕೂಡಿಸಿ ಅರದು ಶ್ರುತಿ ಪ್ರಸಿದ್ಧವಾದ ಬ್ರಹ್ಮ ಶಿವ ರುದ್ರನೆಂಬ ಪರ್ಯಾಯ ನಾಮವುಳ್ಳ ಮಹಾಲಿಂಗವನು ಧ್ಯಾನಿಸುತ್ತ ಪಾನವ ಮಾಡುವಾತನು ಶಿವಲೋಕವನೆಯ್ದವನಯ್ಯ ಶಾಂತವೀರೇಶ್ವರಾ