Index   ವಚನ - 269    Search  
 
ಬಳಿಕ ಸರ್ವ ಮಂತ್ರದಿಂ ಶಿರಸ್ಸಾದಿ ಸರ್ವಾಂಗಮ ನ್ಯಾಸಂಗೈಯ್ವುದು. ಬಳಿಕ ಅಂಗನ್ಯಾಸದಲ್ಲಿ ಕನಿಷ್ಠಂಗುಷ್ಠ ಯೋಗದಿಂ ಹೃದಯ ಅನಾಮಿಕಾಂಗುಷ್ಠ ಯೋಗದಿಂ ಶಿಖಿ ಕರದ್ವಯ ತರ್ಜನಿಗಳಿಂ ಕವಚ ದಕ್ಷಿಣ ಕರದ ಮಧ್ಯಾಂಗುಲಿ ತ್ರಯದಿಂ ನೇತ್ರ ದಕ್ಷಿಣ ಚತುರಂಗುಲಿಗಳಿಂ ವಾಮ ಕರತಳದಲ್ಲಿ ತಾಳತ್ರಯದಿಂದಸ್ತಂಗಳಂ ಪ್ರಣವಾದಿ ‘ಯ’ ಕಾರಾಂತಮಾದ ಮಂತ್ರಾಕ್ಷರಂಗಳಂ ಪೂರ್ವೋಕ್ತ ಕ್ರಮದಿಂ ಆಯಾ ಪಲ್ಲವಾರ್ಥವರಿದೊಡಗೂಡಿ ಮಾಳ್ಪುದೆ ‘ಸೃಷ್ಠಿನ್ಯಾಸ’ವೆನಿಸುವುದು. ಬಳಿಕ ಮಂತ್ರ ವರ್ಣ ಭೇದವಿಲ್ಲದೆ ಅಸ್ತ್ರಾದಿ ಹೃದಯಾಂತಮಾಗಿ ಮಾಳ್ಪುದೆ ‘ಸಂಹಾರ ನ್ಯಾಸ’ ವೆನಿಸುವುದು. ಬಳಿಕ ಕವಚಾದಿ ಶಿಖಾಂತಮಾಗಿ ಮಾಳ್ಪುದೆ ‘ಸ್ಥಿತಿನ್ಯಾಸ’ವೆನಿಸೂದು ಬಳಿಕ ಈಶಾನಾದಿ ಸದ್ಯಾಂತ ಮಾದುದೆ ಸೃಷ್ಠಿ. ಸದ್ಯಾದಿ ಈಶಾನಾಂತಮಾದುದೆ ‘ಸಂಹಾರ’ ಅಘೋರಾದಿ ತತ್ಪುರಿಷಾಂತಮಾದುದೆ ‘ಸ್ಥಿತಿನ್ಯಾಸ’ವಹುದೆಂದರಿ. ಪಂಚಬ್ರಹ್ಮನ್ಯಾಸಂಗಳಂ ಕರ ದೇಹ ಅಂಗತ್ರಯಂಗಳಲ್ಲಿ ಮಾಳ್ಪುದು. ಮೇಲೆ ಪೂರ್ವಾದಿ ಊರ್ಧ್ವಾಂತಮಾದ ಪಂಚ ದಿಕ್ಕುಗಳಲ್ಲಿ ನ ಕಾರಾದಿ ಯ ಕಾರಂತಮಾದಕ್ಷರಂಗಳನಾ ಕ್ರಮದಿಂ ಸ್ಥಾಪಿಸುವುದಯ್ಯ ಶಾಂತವೀರೇಶ್ವರಾ