ಶಿವಯೋಗೀಶ್ವರನು ಒಂದಾನೊಂದು ಠಾವಿನಲ್ಲಿ
ಭ್ರಷ್ಟನಾದ ಹಾಂಗಿರುವನು, ಎಂದು ಠಾವಿನಲ್ಲಿ ಶ್ರೇಷ್ಠನಾಗಿರುವನು,
ಕೆಲವು ಠಾವಿನಲ್ಲಿ ಭೂತ ಪಿಶಾಚಿಗಳ ಹಾಂಗಿರುವನು.
ಈ ಪ್ರಕಾರದಲ್ಲಿ ಹಲವು ವೇಷಂಗಳನು ಧರಿಸಿ
ಭೂತಳದಲ್ಲಿ ಚರಿಸುವನಯ್ಯ.
ಹಿತವಾದ ಪರಿಮಳವನುಳ್ಳ ಪಾನೀಯಂಗಳನು
ರಸಾವಳಿಗಳನು ಸಮರ್ಪಣೆಯ[ಮಾಡುವ]ಲ್ಲಿ
ಸಮಾನವಾದ ಫಲವುಂಟು.
ಬೆಲ್ಲ ಬಾಳೆಹಣ್ಣು ಸಕ್ಕರೆ ಜೇನುತುಪ್ಪ ಮೊದಲಾದ ಫಲಂಗಳ
ನೂತನವಾದ ತಣ್ಣಿತ್ತಾದ ಕರ್ಪೂರದಿಂದ ಪರಿಮಳಿಸುವ
ಮಜ್ಜಿಗೆಯನು ಶಿವಯೋಗೀಶ್ವರನಿಗರ್ಪಿಸಿ
ಅನಂತಕೋಟಿ ಪುಣ್ಯವನು
ಉಪಾಧಿಭಕ್ತನು ಎಯ್ದುವನಯ್ಯ ಶಾಂತವೀರೇಶ್ವರಾ
ಸೂತ್ರ : ಈ ಪ್ರಕಾರದಿಂದ ಸಮಸ್ತ ಭಕ್ತಜನಂಗಳಿಗೆ ಉಪದೇಶಿಸುವ ಮಹಾತ್ಮನು
ತಾನಾ ಉಪಾಧಿಯನುದಾಸೀನಂಗೆಯ್ದು ನಿರುಪಾಧಿಕನಾಗಿ ಸೇವಾಪರನಾದುದು
ಹೇಗಯ್ಯ ಎಂದೊಡೆ ಮುಂದೆ ‘ನಿರುಪಾಧಿಕ ಮಾಟಸ್ಥಲ’ವಾದುದು.
Art
Manuscript
Music
Courtesy:
Transliteration
Śivayōgīśvaranu ondānondu ṭhāvinalli
bhraṣṭanāda hāṅgiruvanu, endu ṭhāvinalli śrēṣṭhanāgiruvanu,
kelavu ṭhāvinalli bhūta piśācigaḷa hāṅgiruvanu.
Ī prakāradalli halavu vēṣaṅgaḷanu dharisi
bhūtaḷadalli carisuvanayya.
Hitavāda parimaḷavanuḷḷa pānīyaṅgaḷanu
rasāvaḷigaḷanu samarpaṇeya[māḍuva]lli
samānavāda phalavuṇṭu.
Bella bāḷehaṇṇu sakkare jēnutuppa modalāda phalaṅgaḷa
nūtanavāda taṇṇittāda karpūradinda parimaḷisuva
majjigeyanu śivayōgīśvaranigarpisi
anantakōṭi puṇyavanu
upādhibhaktanu eyduvanayya śāntavīrēśvarāSūtra: Ī prakāradinda samasta bhaktajanaṅgaḷige upadēśisuva mahātmanu
tānā upādhiyanudāsīnaṅgeydu nirupādhikanāgi sēvāparanādudu
hēgayya endoḍe munde ‘nirupādhika māṭasthala’vādudu.