Index   ವಚನ - 395    Search  
 
ಈ ಕ್ರಿಯಾ ಜ್ಞಾನಾತ್ಮಕನಾದ ಶಿವನು ಸರ್ವ ವ್ಯಾಪಕನು ಕಂಡಾ. ಸಮಸ್ತ ಜಗತ್ತು ಶಿವಮಯವಯ್ಯ. ಸಕಲ ಜೀವರು ಶಿವಸ್ವರೂಪವಯ್ಯ ಶಾಂತವೀರೇಶ್ವರಾ ಸೂತ್ರ : ಈ ಪ್ರಕಾರದಿಂದ ಶಿವನೆ ಜಗದ್ರೂಪವು. ಆ ಜಗದ್ವ್ಯತಿರಿಕ್ತ ರೂಪವು ಎಂಬ ಎರಡರಲ್ಲಿಯೂ ಸಮರ್ಥನೆಂದು ತಿಳಿದು ಆ ಶಿವನನು ತನ್ನಲ್ಲಿ ಆಲಂಗಿಸುತ್ತಿರುವ ಭೇದ ಮಾಹೇಶ್ವರನಲ್ಲಿ. ಅಂಥ ಶಿವನು ಭಕ್ತದೇಹಿಕ ದೇವನಾಗಿರುತ್ತಿರ್ದ ಭೇದವು ಹೇಗೆಂದೊಡೆ ಮುಂದೆ ‘ಭಕ್ತ ದೇಹಿಕಲಿಂಗಸ್ಥಲ’ವಾದುದು,