Index   ವಚನ - 422    Search  
 
ಜಂಗಮಕ್ಕೆ ಒಂದನಿಕ್ಕಿ ತಾನೊಂದನುಂಬನೆ ಪ್ರಸಾದಿ? ಇಲ್ಲ. ಜಂಗಮ ಉಂಡರೆ ಮನದಲ್ಲಿ ಮರುಗುವನೆ ಪ್ರಸಾದಿ? ಇಲ್ಲ. ಜಂಗಮಕ್ಕೆ ತಳಿಗೂಳ ತಳಿದು ತಾ ಗಂಗಳ ತುಂಬ ಒಟ್ಟಿಸಿಕೊಂಡಾತಂಗೆ ಪ್ರಸಾದ ಸಲ್ಲದಯ್ಯ. ಅಶನ ಭೋಜನ ವಸ್ತ್ರ ತಾಂಬೂಲಂಗಳನು ಗುರುಲಿಂಗ ಜಂಗಮ್ಕಕೆ [ಈಯದೆ] ಆವಾತನು ಪಂಕ್ತಿ ಭೇದವ ಮಾಡಿದಾತನು ಶಿವದ್ರೋಹಿಯಯ್ಯ ಶಾಂತವೀರೇಶ್ವರಾ